🔥 Burn Fat Fast. Discover How! 💪

ಆತ್ಮೀಯ ಸ್ಪರ್ಧಾರ್ಥಿಗಳೆ, ಜೀವನ ಸಂಕೀರ್ಣ, ಜಟಿಲವಲ್ಲ. ಅದು ಸ | Kannada Literature | ಕನ್ನಡ ಸಾಹಿತ್ಯ

ಆತ್ಮೀಯ ಸ್ಪರ್ಧಾರ್ಥಿಗಳೆ,
ಜೀವನ ಸಂಕೀರ್ಣ, ಜಟಿಲವಲ್ಲ. ಅದು ಸುಂದರ ಸಮನ್ವಯದ ಪ್ರತೀಕ.
ಹಗಲು-ರಾತ್ರಿಗಳು, ಋತುಗಳು ಇರುವಂತೆ ಈ ಜೀವನದಲ್ಲಿಯೂ ಕೂಡ ಏರಿಳಿತ, ಸ್ಥಾನಪಲ್ಲಟಗಳು ಸಾಮಾನ್ಯ. ಗೆದ್ದಾಗ ಹಿಗ್ಗಿ, ಸೋತಾಗ ಕುಗ್ಗಿ ಹೋಗುವ ನಾವು ಬಿರಿ ಬಿಸಿಲ ಬೇಸಿಗೆಯ ನಂತರದ ವಸಂತವನ್ನೇ ಮರೆತಿರುತ್ತೇವೆ. ಈ ದಿಸೆಯಲ್ಲಿ ಇಂದು ಹಗಲಿರುಳೆನ್ನದೆ ಕಷ್ಟ - ನಷ್ಟಗಳ ಜೊತೆ ಕಾದಾಡುತ್ತಿರುವ ನಿಮಗೆಲ್ಲರಿಗೂ ಗೆಲುವಿನ ವಸಂತ ಸ್ವಾಗತಕ್ಕಾಗಿ ಕಾದಿರುತ್ತದೆ. ನಿಮ್ಮ ಹೋರಾಟ ನಿರಂತರವಾಗಿರಲಿ, ಈ ಹೋರಾಟದಲ್ಲಿ ನಿಮ್ಮನ್ನು ಇನ್ನಷ್ಟು ಬಲಪಡಿಸಲೆಂದೇ ' ಜ್ಞಾನ ದರ್ಶನ' ಸಂಸ್ಥೆಯು 'ಅಕ್ಷರ ದಾಸೋಹ' ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಗೆಲುವಿನ ರೂವಾರಿಯಾಗಿ ಸಾಧಕರಾಗಲೆಂದು ಆಶಿಸುತ್ತೇವೆ.

- ಅಕ್ಷರ ದಾಸೋಹ ಪತ್ರಿಕಾ ತಂಡ.

@jnanadarshana