🔥 Burn Fat Fast. Discover How! 💪

ಸ್ಮರಣೆ -ವಿ ಕೃ ಗೋಕಾಕ್ ( 9 ಆಗಸ್ಟ್ 1909 - 28 ಏಪ್ರಿಲ್ 1992) ಎಂದು ಪ | Unacademy Kannada

ಸ್ಮರಣೆ
-ವಿ ಕೃ ಗೋಕಾಕ್ ( 9 ಆಗಸ್ಟ್ 1909 - 28 ಏಪ್ರಿಲ್ 1992) ಎಂದು ಪ್ರಖ್ಯಾತರಾಗಿದ್ದ ವಿನಾಯಕ ಕೃಷ್ಣ ಗೋಕಾಕ್, ಕನ್ನಡದ ಹೆಸರಾಂತ ಕವಿ ಮತ್ತು ಲೇಖಕರಾಗಿದ್ದರು.
-ಅವರು ಭಾರತೀಯ ಇತಿಹಾಸಕಾರರಾಗಿದ್ದರು ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಕೂಡ ವಿದ್ವಾಂಸರಾಗಿದ್ದರು.

-ಅವರು ತಮ್ಮ ಮಹಾಕಾವ್ಯ "ಭಾರತ ಸಿಂಧು ರಶ್ಮಿ"ಗಾಗಿ 1990 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು ಮತ್ತು ಈ ಪುರಸ್ಕಾರವನ್ನು ಪಡೆದ ಕನ್ನಡದ ಐದನೇ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
-1980 ರ ದಶಕದಲ್ಲಿ, ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಘೋಷಿಸಲು ಶಿಫಾರಸು ಮಾಡಿದ 'ಗೋಕಾಕ್ ಸಮಿತಿ'ಯ ನೇತೃತ್ವವನ್ನು ವಿ. ಕೃ. ಗೋಕಾಕರು ವಹಿಸಿದ್ದರು
-ಗೋಕಾಕರ ಬರವಣಿಗೆ ಧರ್ಮ, ತತ್ವಶಾಸ್ತ್ರ, ಶಿಕ್ಷಣ ಮತ್ತು ಸಂಸ್ಕೃತಿಗಳಲ್ಲಿ ಅವರ ಪಾಂಡಿತ್ಯವನ್ನು ಪ್ರತಿಬಿಂಬಿಸುತ್ತದೆ. ವಿದೇಶದಲ್ಲಿ ಅವರ ಶಿಕ್ಷಣವು ಎರಡು ಪ್ರವಾಸ ಕಥನಗಳನ್ನು ಬರೆಯಲು ಪ್ರೇರೇಪಿಸಿತು.
-ಗೋಕಾಕರ ಸಮಯದಲ್ಲಿ ಕನ್ನಡದಲ್ಲಿ ನವೋದಯ ಚಳವಳಿಯು ಉತ್ತುಂಗದಲ್ಲಿತ್ತು ಮತ್ತು ಗೋಕಾಕರು ಆ ನಿಟ್ಟಿನಲ್ಲಿ ಅಪಾರವಾದ ಕೊಡುಗೆ ನೀಡಿದರು.
-ವಿ.ಕೆ.ಗೋಕಾಕ್ ಅವರು ವಿನಾಯಕ ಎಂಬ ಕಾವ್ಯನಾಮದಲ್ಲಿ ಅನೇಕ ಕವನ ಸಂಕಲನಗಳನ್ನು ಬರೆದಿದ್ದಾರೆ. ಈ ಸಂಗ್ರಹಗಳಲ್ಲಿ 'ಸಮುದ್ರಗೀತೆಗಳು', 'ಬಾಲದೇಗುಲದಲ್ಲಿ', 'ಅಭ್ಯುದಯ', 'ಧ್ಯವ ಪೃಥ್ವಿ' ಮತ್ತು 'ಊರ್ನಾಭ' ಸೇರಿವೆ.
-ಅವರ ‘ಸಮರಸವೇ ಜೀವನ’ ಕಾದಂಬರಿಯನ್ನು ಅವರ ಪುತ್ರಿ ಯಶೋಧರ ಭಟ್ ಅವರು ‘The Agony and the Ecstasy’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ.