🔥 Burn Fat Fast. Discover How! 💪

★ ಚಿಕ್ಕದೇವರಾಜ ಒಡೆಯರ್ (ಸಾ.ಶ. 1673-1704): ಆರಂಭದ ಮೈಸೂರು ಒಡೆಯರಲ್ | 'ಸ್ಪರ್ಧಾಲೋಕ'-'IAS/KAS..in ಕನ್ನಡ'

★ ಚಿಕ್ಕದೇವರಾಜ ಒಡೆಯರ್ (ಸಾ.ಶ. 1673-1704):

ಆರಂಭದ ಮೈಸೂರು ಒಡೆಯರಲ್ಲಿ ಇವರು ಸಮರ್ಥ ಅರಸರು. ‘ಕರ್ಣಾಟಕ ಚಕ್ರವರ್ತಿ’, ‘ಅಪ್ರತಿಮ ವೀರ’, ‘ತೆಂಕಣರಾಜ’, ‘ರಾಜಾಜಗದೇವ’, ‘ಮಹಾರಾಷ್ಟ್ರ ಭೂಪಾಲ ಜಲರಿಪು’ ಮುಂತಾದ ಬಿರುದುಗಳನ್ನು ಗಳಿಸಿದ್ದರು.

ಇವರು ತಮ್ಮ ಖಜಾನೆಯಲ್ಲಿ ಒಂಭತ್ತು ಕೋಟಿ ಚಿನ್ನದ ಪಗೋಡಗಳನ್ನು ಸಂಗ್ರಹಿಸಿ ‘ನವಕೋಟಿ ನಾರಾಯಣ’ ಎಂಬ ಬಿರುದು ಗಳಿಸಿದ್ದರು.

ಇವರ ಕಾಲದಲ್ಲಿ ಆರಕ್ಷಕ(ಪೊಲೀಸ್) ವ್ಯವಸ್ಥೆಯನ್ನು ಜಾರಿಗೆತರಲಾಯಿತು.

ಮೊಘಲ್ ಬಾದಷಾ ಔರಂಗಜೇಬನ ಆಸ್ಥಾನಕ್ಕೆ ರಾಯಭಾರಿಯನ್ನು ಕಳುಹಿಸುವುದರ ಮೂಲಕ ಅವನ ಸ್ನೇಹವನ್ನು ಸಂಪಾದಿಸಿದರು.

ಇವರು ಗೀತಗೋಪಾಲ ಮತ್ತು ಚಿಕ್ಕದೇವರಾಜ ಬಿನ್ನಪಂ ಎಂಬ ಕೃತಿಗಳನ್ನು ರಚನೆ ಮಾಡಿದರು.

ಸಾ.ಶ.1687 ರಲ್ಲಿ ಬೆಂಗಳೂರು ನಗರವನ್ನು ಮೂರು ಲಕ್ಷ ಚಿನ್ನದ ವರಹಗಳನ್ನು ಕೊಟ್ಟು ಮೊಘಲರಿಂದ ಖರೀದಿಸಿದರು.

ಇವರ ಕಾಲದಲ್ಲಿ ಆಡಳಿತವು ಅಠಾರಾ ಕಛೇರಿ ಎಂಬ 18 ಇಲಾಖೆಗಳಾಗಿ ವಿಭಾಗಿಸಲ್ಪಟ್ಟಿತು. ನೀರಾವರಿ ಮತ್ತು ಪಶುಸಂಗೋಪನೆ ಅಭಿವೃದ್ಧಿಯಾಯಿತು.

ಇವರ ಮಂತ್ರಿ ತಿರುಮಲಾರ್ಯನು 'ಚಿಕ್ಕದೇವರಾಜ ವಿಜಯ'
ಮತ್ತು 'ಅಪ್ರತಿಮ ವೀರ ಚರಿತ' ಕೃತಿಗಳನ್ನು ಬರೆದನು.

ಇನ್ನೊಬ್ಬ ಕವಿ ಸಿಂಗರಾರ್ಯನು ಕನ್ನಡದ ಮೊದಲ ನಾಟಕ 'ಮಿತ್ರಾವಿಂದ ಗೋವಿಂದ'ವನ್ನು ಬರೆದಿದ್ದಾನೆ.

ಸಂಚಿ ಹೊನ್ನಮ್ಮ 'ಹದಿಬದೆಯ ಧರ್ಮ' ಎಂಬ ಕೃತಿ ಬರೆದಿದ್ದಾಳೆ. ಅವಳು ಸ್ತ್ರೀ-ಪುರಷರ ಸಮಾನತೆಯನ್ನು ಪ್ರತಿಪಾದಿಸಿದ್ದಾಳೆ.

#kannada #karnatakaHistory #vadeyar #history @spardhaloka