Get Mystery Box with random crypto!

★ ಕೇಂದ್ರ ಮಾಹಿತಿ ಆಯೋಗದ ರಚನೆ : ಕೇಂದ್ರ ಸರ್ಕಾರದ, ಅಧಿಕೃತ ರಾಜ್ಯಪತ್ರ | 'ಸ್ಪರ್ಧಾಲೋಕ'-'IAS/KAS..in ಕನ್ನಡ'

★ ಕೇಂದ್ರ ಮಾಹಿತಿ ಆಯೋಗದ ರಚನೆ :

ಕೇಂದ್ರ ಸರ್ಕಾರದ, ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಕೇಂದ್ರ ಮಾಹಿತಿ ಆಯೋಗವು ರಚಿತವಾಗಿದೆ.

ಆಯೋಗದಲ್ಲಿ ಕೇಂದ್ರದ ಮುಖ್ಯ ಮಾಹಿತಿ ಆಯುಕ್ತರು (ಕೇಮುಮಾಆ) ಹಾಗೂ 10 ಜನರನ್ನು ಮೀರದಂತೆ ಕೇಂದ್ರ ಮಾಹಿತಿ ಆಯುಕ್ತರು (ಕೇಮಾಆ) ಇರಬಹುದಾಗಿದ್ದು, ಇವರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ.

ಕೇಂದ್ರ ಮಾಹಿತಿ ಆಯೋಗದ ಕೇಂದ್ರ ಕಛೇರಿ ದೆಹಲಿಯಲ್ಲಿರತಕ್ಕದ್ದು. ಕೇಂದ್ರ ಮಾಹಿತಿ ಆಯೋಗವು, ಕೇಂದ್ರ ಸರ್ಕಾರದ ಪೂರ್ವ ಅನುಮೋದನೆಯೊಂದಿಗೆ ಭಾರತದ ಇತರ ಸ್ಥಳಗಳಲ್ಲಿ ಕಛೇರಿಗಳನ್ನು ಸ್ಥಾಪಿಸಬಹುದು.

ಕೇಂದ್ರ ಮಾಹಿತಿ ಆಯೋಗದ ವ್ಯವಹಾರಗಳ ಸಾಮಾನ್ಯ ಉಸ್ತುವಾರಿ, ನಿರ್ದೇಶನ ಮತ್ತು ನಿರ್ವಹಣೆ ಮುಖ್ಯ ಮಾಹಿತಿ ಆಯುಕ್ತನಲ್ಲಿ ನಿಹಿತವಾಗಿರತಕ್ಕದ್ದು. ಆತನಿಗೆ ಮಾಹಿತಿ ಆಯುಕ್ತರುಗಳು ನೆರವು ನೀಡತಕ್ಕದ್ದು. ಆತ ಈ ಅಧಿನಿಯಮದಡಿಯಲ್ಲಿ ಯಾವುದೇ ಇತರ ಪ್ರಾಧಿಕಾರಿಯು ನೀಡುವ ನಿರ್ದೇಶನಗಳಿಗೆ ಒಳಪಡದೆ ಕೇಂದ್ರ ಮಾಹಿತಿ ಆಯೋಗವು ಚಲಾಯಿಸಬಹುದಾದಂಥ ಎಲ್ಲ ಅಧಿಕಾರಗಳನ್ನು ಆತನು ಸ್ವತಂತ್ರವಾಗಿ ಚಲಾಯಿಸಬಹುದು ಮತ್ತು ನಿರ್ವಹಿಸಬಹುದಾದಂಥ ಎಲ್ಲ ಕಾರ್ಯಗಳನ್ನು ಮತ್ತು ವಿಷಯಗಳನ್ನು ನಿರ್ವಹಿಸಬಹುದು.

#cic #info #generalStudies #ias2021 #kas2021 @spardhaloka