🔥 Burn Fat Fast. Discover How! 💪

ಶಿವಮೊಗ್ಗ : ಸೊರಬ ತಾಲ್ಲೂಕಿನ ಜಡೆ ಹೊಬಳಿ ತಲಗುಂದ ಗ್ರಾಮದಲ್ಲಿ ಕದಂಬ ರವಿ | ಮಾಹಿತಿ ವೇದಿಕೆ competitive exams

ಶಿವಮೊಗ್ಗ : ಸೊರಬ ತಾಲ್ಲೂಕಿನ ಜಡೆ ಹೊಬಳಿ ತಲಗುಂದ ಗ್ರಾಮದಲ್ಲಿ ಕದಂಬ ರವಿವರ್ಮನ ಶಾಸನ ಪತ್ತೆಯಾಗಿದೆ.

ಪುರಾತತ್ತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ , ಶಿವಪ್ಪನಾಯಕ ಅರಮನೆ ಸಹಾಯಕ ನಿರ್ದೇಶಕ ಡಾ. ಆರ್. ಶೇಜೇಶ್ವರ ಹಾಗೂ ಚುರ್ಚಿಗುಂಡಿ ಮಂಜಪ್ಪ ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ತಲಗುಂದ ಗ್ರಾಮದ ರಾಮೇಶ್ವರ ದೇವಾಲಯದ ಹತ್ತಿರ ಈಗ ಸ್ಥಳೀಯರು ಈಶ್ವರ ದೇವಾಲಯ ಎಂದು ಕರೆಯುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕವನ್ನು ಆಳಿದ ರಾಜ್ಯದ ಪ್ರಥಮ ಕನ್ನಡ ಮನೆತನವಾದ ಕದಂಬ ಅರಸರ ರವಿವರ್ಮನ ಕಾಲದ ಶಾಸನವು ಪತ್ತೆಯಾಗಿದೆ.

ಶಾಸನದಲ್ಲೇನಿದೆ? : ಮೇಲಿರುವ ಶಾಸನವು 143 ಕಲ್ಲಿನ ಸೆಂಮೀ ಉದ್ದ ಹಾಗೂ 49ಸೆಂಮೀ ಆಗಲವಿದ್ದು, ಬ್ರಾಹ್ಮ ಲಿಪಿ ಹಾಗೂ ಸಂಸ್ಕೃತ ಭಾಷೆಯ ಏಳು ಸಾಲಿನಿಂದ ಕೂಡಿದೆ.