Get Mystery Box with random crypto!

ವಿಶ್ವ ಭೂ ದಿನ ಆಚರಣೆ ಹಿನ್ನೆಲೆ:- 1969 ರ ಏಪ್ರಿಲ್ 22 ರಂದು ''ಜಾನ | ಮಾಹಿತಿ ವೇದಿಕೆ competitive exams

ವಿಶ್ವ ಭೂ ದಿನ

ಆಚರಣೆ ಹಿನ್ನೆಲೆ:- 1969 ರ ಏಪ್ರಿಲ್ 22 ರಂದು
''ಜಾನ್ ಮ್ಯಾಕ್ ಕೊನೆಲ್ ''ಅವರು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಜರುಗಿದ ಯುನೆಸ್ಕೊ ಸಮ್ಮೇಳನದಲ್ಲಿ ವಿಶ್ವ ಭೂ ದಿನವನ್ನು ಆಚರಿಸುವ ಪ್ರಸ್ತಾಪ ಮಾಡಿದ್ದರು.
ಆದರೆ 1970 ಎಪ್ರಿಲ್ 22 ರಂದು ವಿಶ್ವದಾದ್ಯಂತ ಮೊದಲ ಬಾರಿ ಆಚರಿಸಲಾಯಿತು.
ವಿಶ್ವ ಭೂದಿನ ನೆಟ್ವರ್ಕ್ (ಜಗತ್ತಿನ ಅತಿದೊಡ್ಡ ಪರಿಸರ ಹೋರಾಟ ಸಂಬಂಧಿಸಿದ ಸಂಸ್ಥೆಯಲ್ಲಿ ಒಂದು) ವತಿಯಿಂದ ಪ್ರತಿವರ್ಷ ಭೂ ದಿನವನ್ನು ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಆಚರಿಸುತ್ತೇವೆ.
2009 ರ ಎಪ್ರಿಲ್ 22ರಂದು ಸಾಮಾನ್ಯ ಸಭೆಯು ಅಂತಾರಾಷ್ಟ್ರೀಯ ಮಾತೃಭೂಮಿ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.
ಕೋಪ್ ಸಮ್ಮೇಳನ:- ಭೂಮಿಯ ಮೇಲಿನ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರಗಳ ನಡುವೆ 1995 ರಿಂದ ನಡೆಯುವ ಸಭೆಯನ್ನು ಕೋಪ ಸಮ್ಮೇಳನಗಳು ಎನ್ನುವರು.

ಭೂಮಿ ಗೀತೆ:- ಭಾರತದ ಕುಮಾರ್' ಅವರು ಬರೆದ "ಭೂ ಗೀತೆ" ಎಂಬುದು 50 ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡಿದೆ.

ಪ್ರಮುಖ ಗುರಿ:- 2016 - 2030 ರ ಅವಧಿಯ ಸುಸ್ಥಿರ ಅಭಿವೃದ್ಧಿ ಗುರುಗಳಲ್ಲಿ 13ನೇ ಗುರಿಯು ಹವಾಮಾನ ಬದಲಾವಣೆ ನಿಯಂತ್ರಣ ಹಾಗೂ 14ನೇ ಗುರಿಯು ಸುಸ್ಥಿರ ಜಲ ಸಂಪನ್ಮೂಲ ರಕ್ಷಣೆ 15ನೇ ಗುರಿಯು ಭೌಗೋಳಿಕ ಪರಿಸರ ವ್ಯವಸ್ಥೆಯ ರಕ್ಷಣೆ ಮತ್ತು ಜೈವಿಕ ವೈವಿಧ್ಯತೆಯ ನಷ್ಟವನ್ನು ತಡೆಯುವುದಕ್ಕೆ ಸಂಬಂಧಿಸಿದೆ.

ಭೂ ಶೃಂಗ ಸಭೆಗಳು:-
> 1992 - ಬ್ರೆಜಿಲ್ನ ರಿಯೊ ಡಿ ಜನೈರೊ
> ರಿಯೋ ಒಪ್ಪಂದ(UNFCCC)
> United Nations Framework Convention on Climate Change

> 2002 - ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್
> ರಿಯೋ +10( UNCSD)
>United Nation's Conference on Sustainable Development

> 2012- ಬ್ರೆಜಿಲ್ನ ರಿಯೊ ಡಿ ಜನೈರೊ
>ರಿಯೋ +20(UNCSD)