Get Mystery Box with random crypto!

★ ನಿಮಗಿದು ಗೊತ್ತಿರಲಿ! ಚೀನಾ ದೇಶ ಜಗತ್ತಿನ ಕಾರ್ಖಾನೆಯಂತೆ ದುಡಿಯುತ್ತಿ | 'ಸ್ಪರ್ಧಾಲೋಕ'-'IAS/KAS..in ಕನ್ನಡ'

★ ನಿಮಗಿದು ಗೊತ್ತಿರಲಿ!

ಚೀನಾ ದೇಶ ಜಗತ್ತಿನ ಕಾರ್ಖಾನೆಯಂತೆ ದುಡಿಯುತ್ತಿದೆ.ಇವತ್ತು ಚೀನಾ ತನ್ನ ವಸ್ತುವನ್ನ ಉತ್ಪಾದಿಸದೆ ಹೋದರೆ ಜಗತ್ತು ತಲ್ಲಣಗೊಳ್ಳುತ್ತದೆ. ಆ ಮಟ್ಟಿಗೆ ಚೀನಾ ಜಗತ್ತಿನ ಮೇಲೆ ತನ್ನ ಹಿಡಿತ ಸಾಧಿಸಿದೆ. ಭಾರತ ಇದೇ ಕೆಲಸವನ್ನ ಜಗತ್ತಿಗೆ ತನ್ನ ಕೌಶಲ್ಯ/ನುರಿತ ಯುವ ಜನತೆಯನ್ನ ನೀಡುವುದರ ಮೂಲಕ ಮಾಡಬಹುದು. ಚೀನಿಯರಿಗೂ ಮತ್ತು ಭಾರತೀಯರಿಗೂ ಇರುವ ವ್ಯತ್ಯಾಸ ಇದೇ... ಭಾರತೀಯರು ಇಂಗ್ಲಿಷ್ ಅಲ್ಲದೆ ಬೇರೆ ಯಾವ ಭಾಷೆಯೇ ಆಗಿರಲಿ ಬಹಳ ಸುಲಭವಾಗಿ ಕಲಿಯುತ್ತಾರೆ.

2014ರ ಅಂಕಿ-ಅಂಶ ಬೆಚ್ಚಿ ಬೀಳಿಸುತ್ತದೆ ಏಕೆಂದರೆ ಜಗತ್ತಿನ ಅತ್ಯಂತ ಹೆಚ್ಚಿನ ಕೌಶಲ್ಯ ಕೊರತೆಯಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನ ಜಪಾನ್ ಅಲಂಕರಿಸಿದರೆ ಭಾರತ ಎರಡನೇ ಸ್ಥಾನದಲ್ಲಿದೆ. ಅನಂತರ ಬ್ರೆಜಿಲ್, ಟರ್ಕಿ, ಮೆಕ್ಸಿಕೋ, ಆಸ್ಟ್ರೇಲಿಯಾ, ಕೆನಡಾ ಹೀಗೆ ಪಟ್ಟಿ ಸಾಗುತ್ತದೆ. ಎಂತಹ ವಿಚಿತ್ರ ಸ್ಥಿತಿ ನೋಡಿ 130 ಕೋಟಿ ಜನಸಂಖ್ಯೆ ಇದ್ದರೂ ನಮ್ಮಲ್ಲಿ ಕೆಲವು ಕೆಲಸ ಮಾಡಲು ತಯಾರಾದ ಅಥವಾ ಸಿದ್ಧತೆ ಹೊಂದಿದ ಜನರ ಕೊರತೆಯಿದೆ!

#gk #info
@spardhaloka