Get Mystery Box with random crypto!

★ ಹವಳದ ದಿಬ್ಬಗಳಲ್ಲಿ ಜೀವ ವೈವಿಧ್ಯ : ಸಾಗರದ ಆಳದಲ್ಲಿ ಕಂಡುಬರುವ ಹವಳಗಳ | 'ಸ್ಪರ್ಧಾಲೋಕ'-'IAS/KAS..in ಕನ್ನಡ'

★ ಹವಳದ ದಿಬ್ಬಗಳಲ್ಲಿ ಜೀವ ವೈವಿಧ್ಯ :

ಸಾಗರದ ಆಳದಲ್ಲಿ ಕಂಡುಬರುವ ಹವಳಗಳು ಒಂದು ರೀತಿಯ ಹುಳುಗಳು. ಇವು ಮನುಷ್ಯರಂತೆ ಸಂಘ ಜೀವಿಗಳು. ಕೆಲವೊಂದು ಪ್ರಭೇದಗಳು ಮಾತ್ರ ಒಂಟಿಯಾಗಿಯೂ ಜೀವಿಸುತ್ತವೆ. ಇವುಗಳು ಬದುಕಲು ದಿಬ್ಬಗಳನ್ನು ಕಟ್ಟುತ್ತಾ ಹೋಗುತ್ತವೆ. 18 ರಿಂದ 33 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರುವ ಸಮುದ್ರದ ಮೇಲ್ಭಾಗದಿಂದ ಗರಿಷ್ಠ 60 ಮೀಟರ್‌ ಆಳದವರೆಗೆ ಇವುಗಳು ವಾಸಿಸುತ್ತವೆ.

ಸಾಗರದ ಜೀವ ವೈವಿಧ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಈ ಹವಳ ದ್ವೀಪಗಳ ರಕ್ಷಣೆ ಅತ್ಯಂತ ಮಹತ್ವದ್ದು. ಒಂದು ಅಂದಾಜಿನ ಪ್ರಕಾರ ಇದೇ ರೀತಿಯ ವಾತಾವರಣ ಇದ್ದಲ್ಲಿ 2050ರ ವೇಳೆಗೆ ಶೇಕಡಾ 70 ರಷ್ಟು ಹವಳದ ದಿಬ್ಬಗಳು ನಶಿಸಿ ಹೋಗುತ್ತವೆ ಎನ್ನುತ್ತಾರೆ ತಜ್ಞರು.

#gk #info #environmentalStudies