Get Mystery Box with random crypto!

ಮಾಹಿತಿ ವೇದಿಕೆ competitive exams

Logo of telegram channel competitiveexams — ಮಾಹಿತಿ ವೇದಿಕೆ competitive exams
Logo of telegram channel competitiveexams — ಮಾಹಿತಿ ವೇದಿಕೆ competitive exams
Channel address: @competitiveexams
Categories: Uncategorized
Language: English
Subscribers: 7.41K
Description from channel

*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನೋಟ್ಸ್ ಗಳು, ಡೈಲಿ ನ್ಯೂಸ್ ಪೇಪರ್, ಪ್ರತಿದಿನ ಮಿನಿ ಪತ್ರಿಕೆಗಳು, ಜಾಬ್ ನೋಟಿಫಿಕೇಶನ್ ಗಳು ಮತ್ತು ಪ್ರಚಲಿತ ಮಾಹಿತಿಯನ್ನೊಳಗೊಂಡ ಎಲ್ಲ ಮಾಹಿತಿ ಒಂದೇ ವೇದಿಕೆಯಲ್ಲಿ.
KAS, psi, SDA, FDA, rrb, banking exams.

Ratings & Reviews

5.00

3 reviews

Reviews can be left only by registered users. All reviews are moderated by admins.

5 stars

3

4 stars

0

3 stars

0

2 stars

0

1 stars

0


The latest Messages 2

2022-02-14 14:14:52 Quiz 'ಕ್ವಿಜ್'
ಭಾರತ ಸಂವಿಧಾನದ ಬಗ್ಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಕೇಳಿರುವ ಕ್ವಿಜ್ ಚಂದು ರಾಜನಾಳ....
16 questions · 30 sec
7.8K viewsBhuvana, 11:14
Open / Comment
2022-02-07 03:12:49 ಮರಳಿ ಬಾರದ ಲೋಕಕ್ಕೆ ಹಾರಿತು ಸಪ್ತಸ್ವರಗಳ ಗಾನಕೋಗಿಲೆ ,
" ಏಯ್ ಮೇರೆ ವತನ್ ಕೆ ಲೋಗೋಂ ಜರಾ ಆಂಖ ಮೇ ಭರಲೋ ಪಾನಿ '' ಲತಾ ಮಂಗೇಶ್ಕರ್ ಅವರ ಈ ದೇಶ ಭಕ್ತಿ ಗೀತೆ ಕೇಳಿದ ಪ್ರಧಾನಿ ನೆಹರೂ, " ಬೇಟಿ ತೂನೆ ಮುಝೆ ರುಲಾದಿಯಾ '' ಎಂದು ಗದ್ಗಗಧಿತರಾಗಿದ್ದರಂತೆ.

ಹೌದು ಆರೇಳು ದಶಕಗಳ ಕಾಲ ನಿರಂತರವಾಗಿ ಹಾಡಿ ದಣಿದ ಭಾರತದ ಕೋಗಿಲೆ ಇಂದು ಶಾಶ್ವತವಾಗಿ ಮೌನವಾಯಿತು, "

ಲತಾ ದೀದಿ ಅಗಲಿಕೆಯಿಂದ ಭಾರತೀಯ ಚಿತ್ರರಂಗ4 Full stop ಭಕ್ತಿಸಂಗೀತ ಹಾಗೂ ಗಝಲ್ ಕ್ಷೇತ್ರ ಇಂದು ನಿಜಕ್ಕೂ ಬಡವಾಯಿತು. ಸಪ್ತಸ್ವರಗಳ ಸಾಮ್ರಾಜ್ಞೆ ಲತಾಮಂಗೇಶ್ಕರ್ ಇನ್ನಿಲ್ಲ ಎಂದು ಹೇಳಲು4 Full stop ಕೇಳಲು ಆಗುವ ನೋವು ಅಷ್ಟಿಷ್ಟಲ್ಲ. ಆದರೆ 92 ರ ವಯೋಮಾನದ ಮಹಾನ್ ಚೇತನದ ಅಗಲಿಕೆ, ವಾಸ್ತವಿಕ ಕಟು ಸತ್ಯ.

ಸೆಪ್ಟೆಂಬರ್ 28, 1929 ರಂದು ಇಂದೋರನ ಮರಾಠಿ ಕುಟುಂಬದಲ್ಲಿ ಜನಿಸಿದ ಹೇಮಾ ಎಂಬ ಬಾಲೆ ಐದು ವಷಗಳ ನಂತರ ಲತಾ ಮಂಗೇಶ್ಕರ ಆದರು. ಬಡತನದ ಕಾರಣ ಶಾಲೆ ಮೆಟ್ಟಿಲು ಹತ್ತಲಾಗಲಿಲ್ಲ. ಫೀ ಕೊಡದ ಕಾರಣಕ್ಕೆ ಸಹೋದರಿ ಆಶಾಳನ್ನು ಶಾಲೆಯಿಂದ ಹೊರಗೆ ಹಾಕಲಾಗಿತ್ತು.ಅದೇ ದಿನ " ನಾನೆಂದೂ ಶಾಲೆ ಮೆಟ್ಟಿಲು ತುಳಿಯುವದಿಲ್ಲ'' ಎಂದು ಶಪಥ ಮಾಡಿದರು.

ಶಾಲೆ ಮೆಟ್ಟಿಲು ತುಳಿಯ ಈ ಸ್ವರಸಾಮ್ರಾಜ್ಞೆಗೆ ನ್ಯೂಯಾಕ್ ಸೇರಿದಂತೆ 6 ವಿಶ್ವವಿದ್ಯಾಲಯಗಳು ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ್ದು ಒಂದು ಇತಿಹಾಸವೆ.

ಇಂದು ಉದಯೋನ್ಮುಖ ಗಾಯಕರ ಆರಾಧ್ಯ ದೈವವಾಗಿದ್ದ ಲತಾಜಿ ಅವರಿಗೆ ಬಂದ ಪ್ರಶಸ್ತಿಗಳು ಅಗಣಿತ. 1942 ರಲ್ಲಿ ಲತಾಜಿ ಅವರು ಹಿನ್ನೆಲೆ ಗಾನಯಾನ ಆರಂಭವಾಯಿತು. ಆಗ ಖ್ಯಾತಿಯ ಉತ್ತುಂಗದಲ್ಲಿದ್ದ ಗಾಯಕಿ ನೂರ್ ಜಹಾನ್ ಜೊತೆ ಇವರ ಧ್ವನಿ ಹೋಲಿಸಿ, ಲತಾಜಿ ಧ್ವನಿ ತುಂಬಾ ತೆಳುವಾಗಿದೆ ಎಂದು ಅನೇಕ ಸಂಗೀತ ನಿರ್ದೇಶಕರು ಅವಕಾಶ ನೀಡಿರಲಿಲ್ಲ.

ಆದರೆ ಅದೆ ತೆಳುವಾದ ಧ್ವನಿ, ಮುಂದೆ " ಭಾರತ ರತ್ನ''ವಾಗಿ ಪ್ರತಿಧ್ವನಿಸಿತು. 1969 ರಲ್ಲಿ ಪದ್ಮಭೂಷಣ, 1999 ರಲ್ಲಿ ಪದ್ಮವಿಭೂಷಣ ಹಾಗೂ 2001 ರಲ್ಲಿ ಭಾರತ ರತ್ಮ ಪ್ರಶಸ್ತಿಗೆ ಭಾಜನರಾಗಿದ್ದರು. ದಾದಾಸಾಹೇಬ್ ಫಾಲ್ಕೆ, ಫಿಲ್ಮಫೇರ್ ದಂತ ಸಾಲು ಸಾಲು ಪ್ರಶಸ್ತಿಗಳು ಇವರ ಮುಡಿಗೇರಿ ತಮ್ಮ ಗೌರವ ಹೆಚ್ಚಿಸಿಕೊಂಡಿದ್ದವು.

ಲತಾಜಿ ಅವರ ಕನ್ನಡದ '' ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ '' ಚಿತ್ರದ " ಬೆಳ್ಳನ ಬೆಳಗಾಯಿತು '' ಇಂದಿಗೂ ಅಷ್ಟೇ ಪ್ರಸಿದ್ಧ. ದೇಶದ 20 ಭಾಷೆಯಗಳಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಖ್ಯಾತಿ ಇವರಿಗಿದೆ. ಅದರಲ್ಲಿ 20 ಸಾವಿರ ಸೋಲೊ, 30 ಸಾವಿರ ಯುಗಳ ಗೀತೆಗಳಾಗಿವೆ.

ಸೋಲೋಗಳಲ್ಲಿ " ಮೊಗಲ್ ಎ ಆಜಮ್ '' ಚಿತ್ರದ " ಪ್ಯಾರ ಕಿಯಾ ತೋ ಡರ್ನಾ ಕ್ಯಾ4 Full stop'' ಓ ಕೌನ್ ಥಿ '' ಚಿತ್ರದ3 Full stop " ಲಗಜಾ ಗಲೆ ಏ ಹಸಿ ರಾತ್ '' 5 Full stop" ಸತ್ಯಂ ಶಿವಂ ಸುಂದರಂ '' ಟೈಟಲ್ ಸಾಂಗ್5 Full stopರಫಿ ಜೊತೆಗಿನ " ಪಾರಸ್ ಮಣಿ'' ಚಿತ್ರದ " ವೊ ಜಬ್ ಯಾದ್ ಆಯೆ '' ಗೀತ್ ಚಿತ್ರದ " ಆಜಾ ತುಝ ಕೊ ಪುಕಾರೆ '' ಹಾಡುಗಳು ಇಂದಿಗೂ ಜನಪ್ರಿಯ.

ಎಸ್ ಪಿ ಬಾಲಸುಬ್ರಮಣ್ಯಂ ಜೊತೆಗಿನ '' ಏಕ್ ದೂಜೆ ಕೇ ಲಿಯೇ " ಚಿತ್ರದ " ತೇರೆ ಮೇರೆ ಬೀಚ ಮೇ ''4 Full stop '' ಮೈನೆ ಪ್ಯಾರ್ ಕಿಯಾ '' ಚಿತ್ರದ '' ದಿಲ್ ದೀವಾನಾ ದಿಲ್ ಸಜನಾಕೆ ''3 Full stop " ಹಮ್ ಆಪ್ ಹೈ ಕೌನ್ '' ಚಿತ್ರದ '' ದೀದಿ ತೇರಾ ದೇವರ್ ದಿವಾನಾ '' ಹಾಡುಗಳಂತೂ ಯುವ ಪ್ರೇಮಿಗಳನ್ನು ಹುಚ್ಚಾಗಿಸಿದ್ದವು.

"ರಾಮ್ ತೇರಿ ಗಂಗಾ ಮೈಲಿ'' ಹಾಡುಗಳಂತೂ ಇತಿಹಾಸ ಸೃಷ್ಟಿಸಿದ್ದವು. ಲತಾಜಿ ಹಾಡುಗಳನ್ನು ಬರಹದಲ್ಲಿ ವರ್ಣಿಸಲಸಾಧ್ಯ. ಅವುಗಳನ್ನು ಕೇಳಿಯೇ ಆನಂದಿಸಬೇಕು

ಕಿಶೋರ್ ಕುಮಾರ್ ಜೊತೆಗಿನ ''ಆರಾಧನಾ'' ಚಿತ್ರದ " ಕೋರಾ ಕಾಗಝ ಥಾ ಯೇ ಮನ ಮೇರಾ''4 Full stop ಮುಕೇಶ್ ಜೊತೆಗಿನ " ಮಿಲನ್'' ಚಿತ್ರದ4 Full stop '' ಸಾವನ್ ಕಾ ಮಹೀನಾ ಪವನ್ ಕರೆ ಸೋರ್ '' ಹಾಗೂ " ಶೋರ್ '' ಚಿತ್ರದ " ಇಕ್ ಪ್ಯಾರ್ ಕಾ ನಗಮಾ '' ಗೀತೆಗಳು ಅಜರಾಮರ.

.ಅತ್ಯಂತ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ 1974 ರಲ್ಲಿ ಗಿನ್ನೀಸ್ ಬುಕ್ ಆಫ್ ರಿಕಾರ್ಡ್ ಸೇರಿತು. ಇವರ ದೈವಭಕ್ತಿ ಎಷ್ಟಿತ್ತೆಂದರೆ ರಿಕಾರ್ಡಿಂಗ್ ಸ್ಟುಡಿಯೋ ಪ್ರವೇಶಿಸುವಾಗ ತಮ್ಮ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬರುತ್ತಿದ್ದರಂತೆ.

ಸಾಧನೆಗಳ ಮೇರು ಪರ್ವತಾಗಿದ್ದರೂ ವಿವಾದಗಳಿಂದ ದೂರವಾಗಲು ಸಾಧ್ಯವಾಗಲಿಲ್ಲ ಈ ಗಾನಕೋಗಿಲೆಗೆ. ಅದೇ ಕಾಲಘಟ್ಟದಲ್ಲಿ ಹಿನ್ನೆಲೆ ಗಾಯಕರಾಗಿ ಬರಲು ಯತ್ನಿಸುತ್ತಿದ್ದ ಹೇಮಲತಾ, ಸುಮನ್ ಕಲ್ಯಾಣಪುರ ಅವರನ್ನು ಲತಾಜಿ ತುಳಿದರು ಎಂಬ ಅಪವಾದವೂ ಇದೆ. ಸಣ್ಣ ಕಾರಣಕ್ಕಾಗಿ ರಫಿ ಜೊತೆ ಮಾತು ಬಿಟ್ಟಿದ್ದರಂತೆ. ಆದರೆ ಈಗ ಎಲ್ಲವೂ ನಗಣ್ಯ.

ಲತಾಜಿ ಇಂಪಾದ ಕಂಠವೆ " ಸತ್ಯಂ'
ಭಕ್ತಿಗೀತಗಳೇ " ಶಿವಂ'' 4 Full stop
ಪ್ರೇಮಾರಾಧನೆ ಹಾಡುಗಳೇ " ಸುಂದರಂ'' 5 Full stop

ದೇಶ ವಿದೇಶಗಳ ಚಿತ್ರ ಪ್ರೇಮಿಗಳ ಪರವಾಗಿ ಇದೋ ನಿಮಗೆ ಅಶ್ರುತರ್ಪಣ, ಕೋಟಿ ಕೋಟಿ ನಮನ.

ಮಾಹಿತಿ ವೇದಿಕೆ competitive exams
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನೋಟ್ಸ್ ಗಳು, ಡೈಲಿ ನ್ಯೂಸ್ ಪೇಪರ್, ಪ್ರತಿದಿನ ಮಿನಿ ಪತ್ರಿಕೆಗಳು, ಜಾಬ್ ನೋಟಿಫಿಕೇಶನ್ ಗಳು ಮತ್ತು ಪ್ರಚಲಿತ ಮಾಹಿತಿಯನ್ನೊಳಗೊಂಡ ಎಲ್ಲ ಮಾಹಿತಿ ಒಂದೇ ವೇದಿಕೆಯಲ್ಲಿ.
KAS, psi, SDA, FDA, rrb, banking exams.
https://t.me/competitiveExams
9.2K viewsK Manju Gowda, 00:12
Open / Comment
2022-02-06 13:58:45 ★ BWSSB: FINAL LISTS:~ ★


ಬೆಂಗಳೂರು ನೀರು ಸರಬರಾಜು & ಒಳಚರಂಡಿ ಮಂಡಳಿ (BWSSB) ಯ ನೇರ ನೇಮಕಾತಿ ಅಧಿಸೂಚನೆ:24-08-2018ಕ್ಕೆ ಸಂಬಂಧಿಸಿದಂತೆ ವಿವಿಧ ವೃಂದದ ಹುದ್ದೆಗಳ ಅಂತಿಮ & ಕ್ರೋಡೀಕೃತ ಆಯ್ಕೆಪಟ್ಟಿಗಳನ್ನು ಇದೀಗ ಪ್ರಕಟಿಸಲಾಗಿದೆ.!!

ಅಂತಿಮ & ಕ್ರೋಡೀಕೃತ ಆಯ್ಕೆಪಟ್ಟಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

https://bwssb.karnataka.gov.in/info-2/Recruitment%20Notification/2018%20Recruitment%20-%20Final%20and%20consolidated%20list/kn
ಮಾಹಿತಿ ವೇದಿಕೆ competitive exams
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನೋಟ್ಸ್ ಗಳು, ಡೈಲಿ ನ್ಯೂಸ್ ಪೇಪರ್, ಪ್ರತಿದಿನ ಮಿನಿ ಪತ್ರಿಕೆಗಳು, ಜಾಬ್ ನೋಟಿಫಿಕೇಶನ್ ಗಳು ಮತ್ತು ಪ್ರಚಲಿತ ಮಾಹಿತಿಯನ್ನೊಳಗೊಂಡ ಎಲ್ಲ ಮಾಹಿತಿ ಒಂದೇ ವೇದಿಕೆಯಲ್ಲಿ.
KAS, psi, SDA, FDA, rrb, banking exams.
https://t.me/competitiveExams
4.6K viewsK Manju Gowda, 10:58
Open / Comment
2022-02-06 09:37:20 ಚಿತ್ರರಂಗದ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ.

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ಗಾಯಕಿ ಲಯಾ ಮಂಗೇಶ್ಕರ್. ಅವರನ್ನು ‘ನೈಟಿಂಗೇಲ್ ಆಫ್ ಇಂಡಿಯಾ’ ಅಂತಲೇ ಪ್ರೀತಿ ಗೌರವದಿಂದ ಕರೆಯಲಾಗುತ್ತಿತ್ತು. ಸಾವಿರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ಹಾಡಿರುವ ಖ್ಯಾತಿ ಲತಾ ಮಂಗೇಶ್ಕರ್ ಅವರದ್ದು. ಹಿಂದಿ, ಮರಾಠಿ ಸೇರಿದಂತೆ 36ಕ್ಕೂ ಅಧಿಕ ಭಾಷೆಗಳಲ್ಲಿ 30 ಸಾವಿರಕ್ಕೂ ಅಧಿಕ ಹಾಡುಗಳಲ್ಲಿ ಲತಾ ಮಂಗೇಶ್ಕರ್ ಗಾನಸುಧೆ ಹರಿಸಿದ್ದರು. 13ನೇ ವಯಸ್ಸಿಗೆ.. ಅಂದ್ರೆ 1942ನೇ ಇಸವಿಯಿಂದ ಸಿನಿಮಾದ ಹಾಡುಗಳಿಗೆ ಲತಾ ಮಂಗೇಶ್ಕರ್ ದನಿಯಾಗುತ್ತಾ ಬಂದಿದ್ದರು.

ಲತಾ ಮಂಗೇಶ್ಕರ್
ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ, ಲತಾ ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು
- ಲತಾ ಅವರ ಮೊದಲ ಹೆಸರು "ಹೇಮಾ"
ಜನನ :- 28 September 1929 (age 92)
ನಿಧನ :- 6 ಫೆಬ್ರವರಿ 2022

ಲತಾ ಮಂಗೇಶ್ಕರ್
ಅವರಿಗೆ ಇದ್ದ ಬಿರುದುಗಳು.

"ನೈಟಿಂಗೇಲ್ ಆಫ್ ಇಂಡಿಯಾ"
"ಬಾಲಿವುಡ್ ನೈಟಿಂಗೇಲ್"
"ಕ್ವೀನ್ ಆಫ್ ದಿ ಮೆಲೋಡಿ’"
'‘ವಾಯ್ಸ್ ಆಫ್ ದಿ ನೇಷನ್’'
'‘ವಾಯ್ಸ್ ಆಫ್ ದಿ ಮಿಲೇನಿಯಮ್"

ಪ್ರಶಸ್ತಿಗಳು

ಭಾರತ ಸರ್ಕಾರ ಇವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ :- 1989
ಪದ್ಮಭೂಷಣ ಪ್ರಶಸ್ತಿ :- 1969
ಪದ್ಮ ವಿಭೂಷಣ :- 1999
ಭಾರತ ರತ್ನ :- 2001
ಫ್ರಾನ್ಸ್ ಸರ್ಕಾರವು 2007 ರಲ್ಲಿ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು (ಆಫೀಸರ್ ಆಫ್ ದಿ ಲೀಜನ್ ಆಫ್ ಆನರ್) ನೀಡಿ ಗೌರವಿಸಿತ್ತು.

ಮೂರು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ
15 ಬೆಂಗಾಲ್‌ ಫಿಲ್ಮ್‌ ಅಸೋಶಿಯೇಶನ್‌ ಪ್ರಶಸ್ತಿ
ನಾಲ್ಕು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
ಎರಡು ಫಿಲಂಫೇರ್‌ ಸ್ಪೆಷಲ್ ಅವಾರ್ಡ್
ಲಂಡನ್‌ (London) ನ 1974 ರಾಯಲ್‌ ಆಲ್ಬರ್ಟ್ ಹಾಲ್‌ನಲ್ಲಿ ಹಾಡುವ ಮೂಲಕ ಅಲ್ಲಿ ಹಾಡಿದ  ಮೊದಲ ಭಾರತೀಯ ಗಾಯಕಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.

ಲತಾರವರ ಆತ್ಮಚರಿತ್ರೆ :-
"ಪುಲೆ ವೇಚಿತಾ"
'ಲತಾ ಮಂಗೇಶ್ಕರ್ ರವರ ಜೀವನ ಚರಿತ್ರೆ'-
"ಹಾಡುಹಕ್ಕಿಯ ಹೃದಯಗೀತೆ"
ಈ ಪುಸ್ತಕವನ್ನು 'ವಿಶ್ವವಾಣಿ' ಸುದ್ದಿಸಂಪಾದಕ 'ವಸಂತ ನಾಡಿಗೇರ್' ರಚಿಸಿದ್ದಾರೆ. 'ಸುಮುಖ ಪ್ರಕಾಶನ' ಪ್ರಕಟಿಸಿರುವ ಈ ಪುಸ್ತಕವು 28 ಅಕ್ಟೋಬರ್ 2009ರಂದು ಬೆಂಗಳೂರಲ್ಲಿ ಲೋಕಾರ್ಪಣೆಗೊಂಡಿತ್ತು.


Join more update telegram channel


https://t.me/competitiveExams
3.7K viewsBhuvana, 06:37
Open / Comment
2022-02-05 10:52:57 Quiz ' ರಾಷ್ಟ್ರೀಯ ಉದ್ಯಾನವನಗಳು.. ಜ್ಞಾನ ಸಂಗಮ ಗ್ರೂಪ್ ವತಿಯಿಂದ - 156 By : ಕದಂಬ (shashi)''
51 questions · 30 sec
3.2K viewsBhuvana, 07:52
Open / Comment
2022-02-05 10:47:50 *ನಿತ್ಯೋತ್ಸವ ಕವಿ ಪ್ರೊ ಕೆ ಎಸ್ ನಿಸಾರ್ ಅಹಮದ್ ಅವರ ಜನ್ಮ ದಿನ*
ಪ್ರೊ.ಕೆ.ಎಸ್.ನಿಸಾರ್ ಅಹಮದ್(5 ಫೆಬ್ರುವರಿ 1936 - 3 ಮೇ 2020) ಕನ್ನಡದ ಪ್ರಮುಖ ಸಾಹಿತಿಗಳಾಗಿದ್ದರು. ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್. ಅವರು ಬರೆದ 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ' ಎಂಬ ಪದ್ಯವು ಬಹಳ ಜನಪ್ರಿಯವಾಗಿ ಅವರು ನಿತ್ಯೋತ್ಸವ ಕವಿಯೆಂದೂ ಕರೆಯಲ್ಪಡುತ್ತಿದ್ದರು.
*ಜನನ*
೫ ಫೆಬ್ರವರಿ ೧೯೩೬
ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ
ಮರಣ
3 ಮೇ 2020 (ವರ್ಷ 84)
ಬೆಂಗಳೂರು
*ವೃತ್ತಿ*
ಸಾಹಿತಿ, ಪ್ರಾಧ್ಯಾಪಕ
ಮನಸು ಗಾಂಧಿ ಬಜಾರು(1960)
ನಿತ್ಯೋತ್ಸವ
ಪ್ರಮುಖ ಪ್ರಶಸ್ತಿ(ಗಳು)
ಪದ್ಮಶ್ರೀ (೨೦೦೮), ರಾಜ್ಯೋತ್ಸವ (೧೯೮೧)
*ಪ್ರಭಾವಗಳು*
ಜಿ. ಪಿ. ರಾಜರತ್ನಂ, ಎಂ.ಸಿ.ಸೀತಾರಾಮಯ್ಯ, ಎಲ್. ಗುಂಡಪ್ಪ
*ಜೀವನ*
ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
*ಸಾಹಿತ್ಯ*
ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.

ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.
೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.
ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ
ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
*ಕೃತಿಗಳು*
*ಕವನ ಸಂಕಲನಗಳು*
ಮನಸು ಗಾಂಧಿ ಬಜಾರು (೧೯೬೦)
ನೆನೆದವರ ಮನದಲ್ಲಿ (೧೯೬೪)
ಸುಮಹೂರ್ತ (೧೯೬೭)
ಸಂಜೆ ಐದರ ಮಳೆ (೧೯೭೦)
ನಾನೆಂಬ ಪರಕೀಯ (೧೯
ನಿತ್ಯೋತ್ಸವ (೧೯೭೬)
ಸ್ವಯಂ ಸೇವೆಯ ಗಿಳಿಗಳು (೧೯೭೭)
ಅನಾಮಿಕ ಆಂಗ್ಲರು(೧೯೮೨),
ಬರಿರಂತರ (೧೯೯೦)
ಸಮಗ್ರ ಕವಿತೆಗಳು (೧೯೯೧)
ನವೋಲ್ಲಾಸ (೧೯೯೪)
ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
ಅರವತ್ತೈದರ ಐಸಿರಿ(೨೦೦೧)
ಸಮಗ್ರ ಭಾವಗೀತೆಗಳು(೨೦೦೧)
ಪ್ರಾತಿನಿಧಿಕ ಕವನಗಳು(೨೦೦೨)
ನಿತ್ಯೋತ್ಸವ ಕವಿತೆ
*ಗದ್ಯ ಸಾಹಿತ್ಯ*
ಅಚ್ಚುಮೆಚ್ಚು
ಇದು ಬರಿ ಬೆಡಗಲ್ಲೊ ಅಣ್ಣ
ಷೇಕ್ಸ್ ಪಿಯರನ ಒಥೆಲ್ಲೊದ ಕನ್ನಡಾನುವಾದ
ಅಮ್ಮ ಆಚಾರ ಮತ್ತು ನಾನು' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ)
*ಪ್ರಶಸ್ತಿ ಪುರಸ್ಕಾರಗಳು*
೨೦೦೬ರ ಮಾಸ್ತಿ ಪ್ರಶಸ್ತಿ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಗೊರೂರು ಪ್ರಶಸ್ತಿ
ಅನಕೃ ಪ್ರಶಸ್ತಿ
ಕೆಂಪೇಗೌಡ ಪ್ರಶಸ್ತಿ
ಪಂಪ ಪ್ರಶಸ್ತಿ
೧೯೮೧ರ ರಾಜ್ಯೋತ್ಸವ ಪ್ರಶಸ್ತಿ
೨೦೦೩ರ ನಾಡೋಜ ಪ್ರಶಸ್ತಿ
೨೦೦೬ರ ಅರಸು ಪ್ರಶಸ್ತಿ
೨೦೦೬ ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
*ಮಾಹಿತಿ ಕೃಪೆ: ಅಂತರ್ಜಾಲ*
*ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ*
3.4K viewsBhuvana, 07:47
Open / Comment
2022-02-05 10:46:30
ಶಿವಮೊಗ್ಗ : ಸೊರಬ ತಾಲ್ಲೂಕಿನ ಜಡೆ ಹೊಬಳಿ ತಲಗುಂದ ಗ್ರಾಮದಲ್ಲಿ ಕದಂಬ ರವಿವರ್ಮನ ಶಾಸನ ಪತ್ತೆಯಾಗಿದೆ.

ಪುರಾತತ್ತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ , ಶಿವಪ್ಪನಾಯಕ ಅರಮನೆ ಸಹಾಯಕ ನಿರ್ದೇಶಕ ಡಾ. ಆರ್. ಶೇಜೇಶ್ವರ ಹಾಗೂ ಚುರ್ಚಿಗುಂಡಿ ಮಂಜಪ್ಪ ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ತಲಗುಂದ ಗ್ರಾಮದ ರಾಮೇಶ್ವರ ದೇವಾಲಯದ ಹತ್ತಿರ ಈಗ ಸ್ಥಳೀಯರು ಈಶ್ವರ ದೇವಾಲಯ ಎಂದು ಕರೆಯುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕವನ್ನು ಆಳಿದ ರಾಜ್ಯದ ಪ್ರಥಮ ಕನ್ನಡ ಮನೆತನವಾದ ಕದಂಬ ಅರಸರ ರವಿವರ್ಮನ ಕಾಲದ ಶಾಸನವು ಪತ್ತೆಯಾಗಿದೆ.

ಶಾಸನದಲ್ಲೇನಿದೆ? : ಮೇಲಿರುವ ಶಾಸನವು 143 ಕಲ್ಲಿನ ಸೆಂಮೀ ಉದ್ದ ಹಾಗೂ 49ಸೆಂಮೀ ಆಗಲವಿದ್ದು, ಬ್ರಾಹ್ಮ ಲಿಪಿ ಹಾಗೂ ಸಂಸ್ಕೃತ ಭಾಷೆಯ ಏಳು ಸಾಲಿನಿಂದ ಕೂಡಿದೆ.
3.3K viewsBhuvana, edited  07:46
Open / Comment
2022-01-30 11:27:52 ಮಹಾತ್ಮಾ ಗಾಂಧೀಜಿ


ಜನನ - ಅಕ್ಟೋಬರ 2 , 1869

ಜನನ ಸ್ಥಳ =
ಗುಜರಾತಿನ ಪೂರಬಂದರ

ಪೂರ್ಣ ಹೆಸರು - ಮೋಹನದಾಸ ಕರಮ ಚಂದ್ರ ಗಾಂಧಿ

ತಂದೆ - ಕರಮಚಂದ ಗಾಂಧಿ

ತಾಯಿ - ಪುತಳಿಬಾಯಿ

ಹೆಂಡತಿ = ಕಸ್ತೂರಿ ಬಾ ಗಾಂಧಿ

ಕಾನೂನು ಪದವಿ ಅಭ್ಯಾಸಕಾಗಿ 1888 ರಲ್ಲಿ ಲಂಡನ್ನಿಗೆ ಪಯಣ ( 1891 ಕ್ಕೆ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಆಗಮನ )

1893 ರಲ್ಲಿ ದಾದ ಅಬ್ದುಲ್ಲಾ ಕಂಪನಿಯ ಕೇಸನ್ನು ವಾದಿಸಲು ದಕ್ಷಿಣ ಆಫ್ರಿಕಾಗೆ ಹೋದರು .
(TET-2020)

ಆಫ್ರಿಕಾದಲ್ಲಿ ನೀಟಾಲ್ ಇಂಡಿಯನ್ ಕಾಂಗ್ರೇಸ ಎಂಬ ಸಂಸ್ಥೆ ಹಾಗೂ ಫೀನಿಕ್ಸ್ ಫಾರಸ್ಟಮ್ & ಟಾಲ್ಸ್ ಟಾಯ್ ಎಂಬ ಎರಡು ಆಶ್ರಮ ಸ್ಥಾಪನೆ .

1915 ಕ್ಕೆ ಭಾರತಕ್ಕೆ ಆಗಮನ

( ಗಾಂಧೀಜಿಯವರ ರಾಜಕೀಯ ಗುರು - ಗೋಪಾಲ ಕೃಷ್ಣ ಗೋಖಲೆ )

1917 ಚಂಪಾರಣ್ಯ ಸತ್ಯಾಗ್ರಹ ( ಭಾರತದಲ್ಲಿ ಗಾಂಧೀಜೀ ನಾಯಕತ್ವ ವಹಿಸಿದ ಮೊದಲ ಸತ್ಯಾಗ್ರಹ )

1918 ಅಹಮದಾಬಾದ ಗಿರಣಿ ಕಾಮಿಕರ ಮುಷ್ಕರ
( ಗಾಂಧಿಯ ಮೊದಲ ಉಪವಾಸ ಸತ್ಯಾಗ್ರಹ )

1918 ಗುಜರಾತಿನ ಬೇಡ ಸತ್ಯಾಗ್ರಹ

1919 ಖಿಲಾಫಫ ಚಳುವಳಿ

1929 – 22 ಅಸಹಕಾರ ಚಳುವಳಿ ( 1922 ಚೌರಿಚೌರಾ ಘಟನೆಯಿಂದ ಅಸಹಕಾರ ಚಳುವಳಿ ಸ್ಥಗಿತ )

1924 ಕರ್ನಾಟಕದಲ್ಲಿ (ಬೆಳಗಾವಿ )ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ .

1931 ಗಾಂಧಿ - ಇರ್ವಿನ ಒಪ್ಪಂದ ( 1931 ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗಿ )

1932 ಪೂನಾ ಒಪ್ಪಂದ
( ಗಾಂಧಿ ಮತ್ತು ಅಂಬೇಡ್ಕರ ಮಧ್ಯೆ )

1930 ಕಾನೂನು ಭಂಗ ಚಳುವಳಿ

1930 ಮಾರ್ಚ 12 ರಂದು ದಂಡಿ ಉಪ್ಪಿನ ಸತ್ಯಾಗ್ರಹ ಸಬರಮತಿ ಆಶ್ರಮದಿಂದ ಪ್ರಾರಂಭ

1942 ಕ್ವಿಟ್ ಇಂಡಿಯಾ ಚಳುವಳಿ

1945 ಸಿಮ್ಲಾ ಒಪ್ಪಂದ

1947 ಕ್ಕೆ ಭಾರತಕ್ಕೆ ಸ್ವತ್ಯಂತ್ರ

30,ಜನೆವರಿ 1948 ರಲ್ಲಿ ಗಾಂಧಿಜೀಯ ಹತ್ಯೆ
( ನಾತುರಾಮ್ ಗೋಡ್ಸೆ ಅವರಿಂದ)

ಗಾಂಧೀಜಿಯ ಪ್ರಮುಖ ಕೃತಿಗಳು

ಹಿಂದ್ ಸ್ವರಾಜ್ ,
ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ ,
ಮೈ ಎಕ್ಸ್‌ಪರಿಮೆಂಟ್ ವಿತ್ ಟೂತ್
ಗೀತಾ ದಿ ಮದರ ಗಾಂಧೀಜಿ

ಗಾಂಧೀಜಿ ಪ್ರಾರಂಭಿಸಿದ ಪ್ರಮುಖ ದಿನಪತ್ರಿಕೆಗಳು

ಯಂಗ್ ಇಂಡಿಯಾ ,
ಹರಿಜನ ,
ನವಜೀವನ


Join more update telegram channel.

https://t.me/competitiveExams
4.9K viewsBhuvana, 08:27
Open / Comment