Get Mystery Box with random crypto!

'ಸ್ಪರ್ಧಾಲೋಕ'-'IAS/KAS..in ಕನ್ನಡ'

Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Channel address: @spardhaloka
Categories: Uncategorized
Language: English
Subscribers: 30.17K
Description from channel

"ಐಎಎಸ್ /ಕೆಎಎಸ್ & ಇತರೆ ಪರೀಕ್ಷೆಗಳಿಗಾಗಿ ಕನ್ನಡದಲ್ಲಿ ವಿಸ್ತೃತ ನೋಟ್ಸ್ "(IAS/KAS Notes in Kannada) Admins-
@yaseen7ash
@Prithvidevgowda
★Blog Link— https://www.spardhaloka.blogspot.in/
★FaceBook link— https://m.facebook.com/spardhaloka.blogspot.in/

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

1

2 stars

0

1 stars

1


The latest Messages 16

2021-02-03 08:11:45
Current affairs February 3
4.5K viewsMITHUN, 05:11
Open / Comment
2021-02-03 06:20:33 January 31st Current affairs. Manjunath. K.N.Tumkur.pdf
4.6K viewsಮಂಜುನಾಥ್.ಕೆ.ಎನ್., 03:20
Open / Comment
2021-02-03 05:56:18 ★ ರಿಸರ್ವ್​ ಬ್ಯಾಂಕ್​ನಲ್ಲಿ ವಿವಿಧ ಶ್ರೇಣಿಯ ಅಧಿಕಾರಿಗಳ 322 ಹುದ್ದೆಗೆ ಅರ್ಜಿ ಆಹ್ವಾನ

By ವಿಜಯವಾಣಿ ಸುದ್ದಿಜಾಲ
January 31, 2021, 3:01 pm

ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ (ಆರ್​ಬಿಐ) ಕಾರ್ಯನಿರ್ವಹಿಸಲು ಎಷ್ಟೋ ಉದ್ಯೋಗಾಕಾಂಕ್ಷಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಅಂಥವರಿಗೆ ಇಲ್ಲೊಂದು ಉತ್ತಮ ಅವಕಾಶವಿದೆ. ಅಧಿಕಾರಿಗಳ ಹುದ್ದೆಗೆ (ಗ್ರೇಡ್ ಬಿ) ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 322

ಆರ್‍ಬಿಐನಲ್ಲಿರುವ ಗ್ರೇಡ್ ಬಿ ಅಧಿಕಾರಿಗಳ ಹುದ್ದೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 130 ಸ್ಥಾನ, ಎಸ್ಸಿಗೆ 59, ಎಸ್ಟಿಗೆ 35, ಇತರ ಹಿಂದುಳಿದ ವರ್ಗಕ್ಕೆ 68, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 30 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಈ ಹಿಂದೆ ಮೊದಲ ಹಂತದ ಪರೀಕ್ಷೆಗೆ 6 ಬಾರಿ ಅರ್ಜಿ ಸಲ್ಲಿಸಿರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ. ಈ ನಿಯಮ ಮೀಸಲಾತಿ ಅಭ್ಯರ್ಥಿಗಳಿಗೆ ಅನ್ವಯವಾಗುವುದಿಲ್ಲ.

ಹುದ್ದೆ, ಸಂಖ್ಯೆ ವಿವರ
* ಅಧಿಕಾರಿ ಗ್ರೇಡ್ ಬಿ ಜನರಲ್ – 270
* ಅಧಿಕಾರಿ ಗ್ರೇಡ್ ಬಿ ಡಿಇಪಿಆರ್ – 29
* ಅಧಿಕಾರಿ ಗ್ರೇಡ್ ಬಿ ಡಿಎಸ್‍ಐಎಂ – 23

ಶೈಕ್ಷಣಿಕ ಅರ್ಹತೆ:
ಜನರಲ್ ವಿಭಾಗದ ಹುದ್ದೆಗೆ ಯಾವುದೇ ಪದವಿ/ ತತ್ಸಮಾನ ಟೆಕ್ನಿಕಲ್ ಅಥವಾ ವೃತ್ತಿ ಆಧಾರಿತ ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಉಳಿದ ಹುದ್ದೆಗಳಿಗೆ ಎಕನಾಮಿಕ್ಸ್/ ಎಕನಾಮೆಟ್ರಿಕ್ಸ್/ ಕ್ವಾಂಟಿಟೇಟೀವ್ ಎಕನಾಮಿಕ್ಸ್/ ಮ್ಯಾಥಮೆಟಿಕಲ್ ಎಕನಾಮಿಕ್ಸ್/ ಇಂಟರ್‍ಗ್ರೇಟೆಡ್ ಎಕನಾಮಿಕ್ಸ್/ ಫೈನಾನ್ಸ್/ ಅಗ್ರಿಕಲ್ಚರಲ್/ ಬಿಜಿನೆಸ್/ ಡೆವೆಲಪ್‍ಮೆಂಟ್/ ಸ್ಟ್ಯಾಟಿಸ್ಟಿಕ್ಸ್/ ಮ್ಯಾಥಮೆಟಿಕಲ್ ಸ್ಟಾೃಟಿಸ್ಟಿಕ್ಸ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು.

ವಯೋಮಿತಿ: 1.1.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಂ.ಫಿಲ್, ಪಿಎಚ್.ಡಿ ಮಾಡಿದ ಅಭ್ಯರ್ಥಿಗಳಿಗೆ ಗರಿಷ್ಠ 32 ಹಾಗೂ 34 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಮೂಲ ವೇತನ 35,150 ರೂ. ನಿಂದ 83,254 ರೂ. ಇದ್ದು, ಡಿಎ, ಸ್ಥಳೀಯ ಭತ್ಯೆ, ಮನೆ ಬಾಡಿಗೆ ಭತ್ಯೆ, ಕುಟುಂಬ ಭತ್ಯೆ ಹಾಗೂ ಗ್ರೇಡ್ ಭತ್ಯೆಗಳನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: 2 ಹಂತದ ಆನ್‍ಲೈನ್ ಪರೀಕ್ಷೆ ಅಂಕ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿ ಆಯ್ಕೆ ಮಾಡಲಾಗುವುದು. ಆನ್‍ಲೈನ್ ಪರೀಕ್ಷೆಯ ಪತ್ರಿಕೆ 1ಕ್ಕೆ ಕರ್ನಾಟಕದ ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಜತೆಗೆ ಇತರ ರಾಜ್ಯಗಳಲ್ಲೂ ಪರೀಕ್ಷಾ ಕೇಂದ್ರ ಇರಲಿದ್ದು, ಸಾಮಾನ್ಯ ಜ್ಞಾನ, ಇಂಗ್ಲಿಷ್ ಭಾಷೆ, ಕ್ವಾಂಟಿಟೇಟೀವ್ ಆಫ್ಟಿಟ್ಯೂಡ್ ಮತ್ತು ರೀಸನಿಂಗ್ ಸಂಬಂಧಿತ ಪ್ರಶ್ನೆಗಳಿರುತ್ತವೆ. ಫೇಸ್2 ಗೆ ಬೆಂಗಳೂರು ಸೇರಿ ಇತರ ನಗರಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಇದರಲ್ಲಿ ಅರ್ಥಶಾಸ ಮತ್ತು ಸಾಮಾಜಿಕ ಸಮಸ್ಯೆ, ಇಂಗ್ಲಿಷ್, ಫೈನಾನ್ಸ್ ಆ್ಯಂಡ್ ಮ್ಯಾನೇಜ್‍ಮೆಂಟ್ ಸಂಬಂಧಿತ ಪ್ರಶ್ನೆಗಳಿರುತ್ತವೆ. ಆನ್‍ಲೈನ್ ಪರೀಕ್ಷೆಯು ಮಾರ್ಚ್ 6 ರಿಂದ ಪ್ರಾರಂಭವಾಗಲಿದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಮಾಹಿತಿ ಶುಲ್ಕವಾಗಿ 100 ರೂ. ಪಾವತಿಸಬೇಕು, ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು ಮಾಹಿತಿ ಶುಲ್ಕ ಜತೆ ಅರ್ಜಿ ಶುಲ್ಕವಾಗಿ 850 ರೂ. ಪಾವತಿಸಬೇಕು.

* ಉಚಿತ ತರಬೇತಿ
ಮೀಸಲಾತಿ ಅಭ್ಯರ್ಥಿಗಳಿಗೆ ಫೇಸ್ 1 ಹಾಗೂ 2ರ ಪರೀಕ್ಷೆಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಅರ್ಜಿ ಭರ್ತಿ ಮಾಡುವಾಗ ತರಬೇತಿ ಪಡೆಯಲು ಆಸಕ್ತಿ ಇರುವವರು ಸೂಚನೆ ನೀಡಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 15.2.2021
ಅಧಿಸೂಚನೆಗೆ: https://bit.ly/2YmmCzm
ಮಾಹಿತಿಗೆ: http://www.rbi.org.in

#notification #job @spardhaloka
4.8K viewsYaseen M (KCS) @spardhaloka, edited  02:56
Open / Comment
2021-02-03 05:48:14ನೋಟು ಮುದ್ರಣ ಕೇಂದ್ರದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಜಿ ಆಹ್ವಾನ
By :ವಿಜಯವಾಣಿ ಸುದ್ದಿಜಾಲ
February 2, 2021, 3:08 pm

ಸೆಕ್ಯುರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೋರೇಷನ್ ಆಫ್​ ಇಂಡಿಯಾ ಲಿಮಿಟೆಡ್‍ನ (ಎಸ್‍ಪಿಎಂಸಿಐಎಲ್) 9 ಘಟಕಗಳಲ್ಲಿ ಒಂದಾಗಿರುವ ಕೋಲ್ಕತದ ಇಂಡಿಯಾ ಗವರ್ನಮೆಂಟ್ ಮಿಂಟ್‍ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್‍ಪಿಎಂಸಿಐಎಲ್ ನೋಟುಗಳು, ಪಾಸ್‍ಪೋರ್ಟ್​, ಸ್ಟ್ಯಾಂಪ್​ ಪೇಪರ್ಸ್, ಅಂಚೆ ಚೀಟಿಗಳ ವಿನ್ಯಾಸ ಹಾಗೂ ಮುದ್ರಣದಲ್ಲಿ ತೊಡಗಿದ್ದು, ಇಲ್ಲಿನ ಕೆಲ ವಿಭಾಗಗಳಲ್ಲಿನ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇಲ್ಲಿ ನೇಮಕಗೊಂಡ ಅಭ್ಯರ್ಥಿಗಳು ಇದರ ಯಾವುದೇ ಶಾಖೆಯಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಒಟ್ಟು ಹುದ್ದೆಗಳು: 54.

ಹುದ್ದೆ, ಸಂಖ್ಯೆ ವಿವರ
* ಸೂಪರ್‍ವೈಸರ್ (ಟೆಕ್ ಆಪರೇಟರ್ಸ್ – ಮೆಕ್ಯಾನಿಕಲ್-8, ಸಿವಿಲ್-1, ಮೆಟಲರ್ಜಿಕಲ್-1) – 10
* ಎನ್‍ಗ್ರೇವರ್-ಐಐಐ (ಸ್ಕಲ್ಪಚರ್-2, ಮೆಟಲ್ ವರ್ಕ್ಸ್​-2, ಪೇಂಟಿಂಗ್-2)- 6
* ಜೂನಿಯರ್ ಆಫೀಸ್ ಅಸಿಸ್ಟೆಂಟ್ – 12
* ಜೂನಿಯರ್ ಬುಲಿಯನ್ ಅಸಿಸ್ಟೆಂಟ್ – 10
* ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್) – 16

ಶೈಕ್ಷಣಿಕ ಅರ್ಹತೆ: ಇಂಜಿನಿಯರಿಂಗ್ ಡಿಪ್ಲೋಮಾ , ಬಿಇ, ಬಿ.ಟೆಕ್, ಐಟಿಐ ಪ್ರಮಾಣಪತ್ರ, ಫೈನ್ಸ್ ಆರ್ಟ್ಸ್​ ಹಾಗೂ ಯಾವುದೇ ಪದವಿ. ಪದವಿಗಳಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಜೂನಿಯರ್ ಹುದ್ದೆಗಳಿಗೆ ಟೈಪಿಂಗ್ ತಿಳಿದಿದ್ದು, ಪ್ರತಿ ನಿಮಿಷಕ್ಕೆ 40 ಇಂಗ್ಲಿಷ್ ಪದ, 30 ಹಿಂದಿ ಪದ ಟೈಪ್ ಮಾಡಬೇಕು. ಕಂಪ್ಯೂಟರ್ ಜ್ಞಾನ ಅವಶ್ಯ.

ವಯೋಮಿತಿ: ಅರ್ಜಿ ಸಲ್ಲಿಕೆಗೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಎಲ್ಲ ಹುದ್ದೆಗಳಿಗೆ ಕನಿಷ್ಠ 18 ವರ್ಷ, ಸೂಪರ್‍ವೈಸರ್ ಹುದ್ದೆಗೆ ಗರಿಷ್ಠ 30 ವರ್ಷ. ಜೂನಿಯರ್ ಟೆಕ್ನೀಷಿಯನ್‍ಗೆ ಗರಿಷ್ಠ 25 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 28 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ವೇತನ: ಸೂಪರ್‍ವೈಸರ್ ಹುದ್ದೆಗೆ ಮಾಸಿಕ 26,000 ರೂ.ನಿಂದ 1,00,000 ರೂ., ಎನ್‍ಗ್ರೇವರ್ ಹುದ್ದೆಗೆ ಮಾಸಿಕ 8,500 ರೂ. ನಿಂದ 20,850 ರೂ., ಜೂನಿಯರ್ ಟೆಕ್ನೀಷಿಯನ್‍ಗೆ ಮಾಸಿಕ 7,750 ರೂ.ನಿಂದ 19,040 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 8,350 ರೂ.ನಿಂದ 20,470 ರೂ. ವೇತನ ಇದೆ.

ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, ಆರ್ಥಿಕವಾಗಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 600 ರೂ, ಎಸ್‍ಸಿ, ಎಸ್‍ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 200ರೂ.

ಆಯ್ಕೆ ಪ್ರಕ್ರಿಯೆ: ಎಲ್ಲ ಹುದ್ದೆಗಳಿಗೆ ಆಯ್ದ ಅಭ್ಯರ್ಥಿಗಳನ್ನು ಆನ್‍ಲೈನ್ ಟೆಸ್ಟ್‍ಗೆ ಆಹ್ವಾನಿಸಲಾಗುವುದು. ಇದರಲ್ಲಿ ಉತ್ತೀರ್ಣರಾದವರಿಗೆ ಹುದ್ದೆಗಳಿಗೆ ಅನುಗುಣವಾಗಿ ಟ್ರೇಡ್ ಪರೀಕ್ಷೆಗೆ / ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಆನ್‍ಲೈನ್ ಪರೀಕ್ಷೆಯಲ್ಲಿ ವೃತ್ತಿ ಜ್ಞಾನ, ಸಾಮಾನ್ಯ ಜ್ಞಾನ, ಇಂಗ್ಲಿಷ್ ಭಾಷೆ, ಲಾಜಿಕಲ್ ರೀಸನಿಂಗ್, ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್ ವಿಷಯಗಳಿರುತ್ತವೆ. ಕೋಲ್ಕತದ ಸುತ್ತಮುತ್ತಲ ಪ್ರದೇಶದಲ್ಲಿ ಆನ್‍ಲೈನ್ ಪರೀಕ್ಷೆ ನಡೆಯಲಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 19.2.2021
ಅಧಿಸೂಚನೆಗೆ: https://bit.ly/3a5ZpH6
ಮಾಹಿತಿಗೆ: https://igmkolkata.spmcil.com

#notification #job @spardhaloka
4.4K viewsYaseen M (KCS) @spardhaloka, edited  02:48
Open / Comment
2021-02-03 05:38:17 ★ ಸಾಮಾನ್ಯವಾಗಿ ಕಡಲಿನ ನೀರು ತಂಪಾಗಿರಬೇಕು. 25 ಡಿಗ್ರಿ ಸೆಲ್ಸಿಯಸ್ ಮೀರಬಾರದು. ಆದರೆ ಕಡಲು ಬಿಸಿಯಾಗುವುದು ಶುಭಸೂಚಕವಲ್ಲ!
4.1K viewsYaseen M (KCS) @spardhaloka, edited  02:38
Open / Comment
2021-02-02 16:47:33 Divakara K Sir ಇಂದಿನ ಕ್ಲಾಸಿನಲ್ಲಿ ಮೂಲಗಳಿಂದ 'TARGET FDA/SDA/PSI General Kannada ಸಾಹಿತ್ಯ ಮತ್ತು ವ್ಯಾಕರಣ' ಅನ್ನು ವಿವರಿಸಲಿದ್ದಾರೆ

ಇದು ಉಚಿತ ಕ್ಲಾಸ್ ಮತ್ತು ತಯಾರಿಕೆಯ ಎಲ್ಲಾ ಹಂತಗಳಲ್ಲಿ ಅಭ್ಯರ್ಥಿಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಲೈವ್ ಅನುಮಾನ ತೆರವುಗೊಳಿಸುವ ಅವಧಿಗಳೂ ಸಹ ಇರುತ್ತವೆ.
Use referral code 'KAS10' to get 10% discount on your subscription.

ಇಂದು 8:00 PM ಗಂಟೆಗೆ ತರಗತಿ ನಿಗದಿಪಡಿಸಲಾಗಿದೆ.
Link: https://unacademy.com/class/target-fdasdapsi-general-kannada-saahity-mttu-vyaakrnn/0DPDKNP9
4.8K viewsYaseen M (KCS) @spardhaloka, 13:47
Open / Comment
2021-02-02 15:24:33
Vijay: Batch Course for FDA/SDA Kannada Medium Batch 15 is here!!

Batch Starts on : 2nd February
This course will cover:
Entire syllabus of FDA/SDA Exams in 1 Year
All the subjects in the new syllabus for FDA/SDA Exams will be covered
Top Educators in the Unacademy Karnataka PSC Platform.

Link of the Course: https://unacademy.com/batch/vijay-batch-course-for-fdasda-kannada-medium-batch-15/5UK3NXR1

Click here to get 10% discount on Plus Subscription: https://unacademy.com/goal/kkk/LVECA/subscribe?referral_code=kas10&duration=12
4.5K viewsYaseen M (KCS) @spardhaloka, 12:24
Open / Comment
2021-02-02 13:40:09 ಕೆಪಿಎಸ್‍ಸಿಯಿಂದ ಮುಂದುಡಲಾದ ಸಹಾಯಕ/ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಪರೀಕ್ಷೆಯನ್ನು ಇದೇ ತಿಂಗಳ 28ನೇ ತಾರೀಖಿನಂದು ನಡೆಸಲಾಗುತ್ತದೆ. (28/02/2021)
#job #notification @spardhaloka
4.3K viewsYaseen M (KCS) @spardhaloka, 10:40
Open / Comment
2021-02-02 13:36:36
4.2K viewsYaseen M (KCS) @spardhaloka, 10:36
Open / Comment
2021-02-02 11:25:36 January 30th Current Affairs. Manjunath K.N.Tumkur.pdf
4.2K viewsಮಂಜುನಾಥ್.ಕೆ.ಎನ್., 08:25
Open / Comment