Get Mystery Box with random crypto!

'ಸ್ಪರ್ಧಾಲೋಕ'-'IAS/KAS..in ಕನ್ನಡ'

Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Channel address: @spardhaloka
Categories: Uncategorized
Language: English
Subscribers: 30.17K
Description from channel

"ಐಎಎಸ್ /ಕೆಎಎಸ್ & ಇತರೆ ಪರೀಕ್ಷೆಗಳಿಗಾಗಿ ಕನ್ನಡದಲ್ಲಿ ವಿಸ್ತೃತ ನೋಟ್ಸ್ "(IAS/KAS Notes in Kannada) Admins-
@yaseen7ash
@Prithvidevgowda
★Blog Link— https://www.spardhaloka.blogspot.in/
★FaceBook link— https://m.facebook.com/spardhaloka.blogspot.in/

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

1

2 stars

0

1 stars

1


The latest Messages 8

2021-02-16 05:43:39 Learning Poverty Report — World Bank.
4.1K viewsYaseen M (KCS) @spardhaloka, 02:43
Open / Comment
2021-02-15 17:09:48 ★ ಕೇಂದ್ರ ಮಾಹಿತಿ ಆಯೋಗದ ರಚನೆ :

ಕೇಂದ್ರ ಸರ್ಕಾರದ, ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಕೇಂದ್ರ ಮಾಹಿತಿ ಆಯೋಗವು ರಚಿತವಾಗಿದೆ.

ಆಯೋಗದಲ್ಲಿ ಕೇಂದ್ರದ ಮುಖ್ಯ ಮಾಹಿತಿ ಆಯುಕ್ತರು (ಕೇಮುಮಾಆ) ಹಾಗೂ 10 ಜನರನ್ನು ಮೀರದಂತೆ ಕೇಂದ್ರ ಮಾಹಿತಿ ಆಯುಕ್ತರು (ಕೇಮಾಆ) ಇರಬಹುದಾಗಿದ್ದು, ಇವರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ.

ಕೇಂದ್ರ ಮಾಹಿತಿ ಆಯೋಗದ ಕೇಂದ್ರ ಕಛೇರಿ ದೆಹಲಿಯಲ್ಲಿರತಕ್ಕದ್ದು. ಕೇಂದ್ರ ಮಾಹಿತಿ ಆಯೋಗವು, ಕೇಂದ್ರ ಸರ್ಕಾರದ ಪೂರ್ವ ಅನುಮೋದನೆಯೊಂದಿಗೆ ಭಾರತದ ಇತರ ಸ್ಥಳಗಳಲ್ಲಿ ಕಛೇರಿಗಳನ್ನು ಸ್ಥಾಪಿಸಬಹುದು.

ಕೇಂದ್ರ ಮಾಹಿತಿ ಆಯೋಗದ ವ್ಯವಹಾರಗಳ ಸಾಮಾನ್ಯ ಉಸ್ತುವಾರಿ, ನಿರ್ದೇಶನ ಮತ್ತು ನಿರ್ವಹಣೆ ಮುಖ್ಯ ಮಾಹಿತಿ ಆಯುಕ್ತನಲ್ಲಿ ನಿಹಿತವಾಗಿರತಕ್ಕದ್ದು. ಆತನಿಗೆ ಮಾಹಿತಿ ಆಯುಕ್ತರುಗಳು ನೆರವು ನೀಡತಕ್ಕದ್ದು. ಆತ ಈ ಅಧಿನಿಯಮದಡಿಯಲ್ಲಿ ಯಾವುದೇ ಇತರ ಪ್ರಾಧಿಕಾರಿಯು ನೀಡುವ ನಿರ್ದೇಶನಗಳಿಗೆ ಒಳಪಡದೆ ಕೇಂದ್ರ ಮಾಹಿತಿ ಆಯೋಗವು ಚಲಾಯಿಸಬಹುದಾದಂಥ ಎಲ್ಲ ಅಧಿಕಾರಗಳನ್ನು ಆತನು ಸ್ವತಂತ್ರವಾಗಿ ಚಲಾಯಿಸಬಹುದು ಮತ್ತು ನಿರ್ವಹಿಸಬಹುದಾದಂಥ ಎಲ್ಲ ಕಾರ್ಯಗಳನ್ನು ಮತ್ತು ವಿಷಯಗಳನ್ನು ನಿರ್ವಹಿಸಬಹುದು.

#cic #info #generalStudies #ias2021 #kas2021 @spardhaloka
4.9K viewsYaseen M (KCS) @spardhaloka, 14:09
Open / Comment
2021-02-15 16:20:31 ಕೆಎಎಸ್ ಮುಖ್ಯ ಪರೀಕ್ಷೆ : ಸಾಮಾನ್ಯ ಅಧ್ಯಯನ ಪತ್ರಿಕೆ 1 2021

#kasExam #kas2021 #questionPaper @spardhaloka
4.8K viewsYaseen M (KCS) @spardhaloka, edited  13:20
Open / Comment
2021-02-15 16:18:21 ಕೆಎಎಸ್ ಮುಖ್ಯ ಪರೀಕ್ಷೆ : ಸಾಮಾನ್ಯ ಅಧ್ಯಯನ ಪತ್ರಿಕೆ 2 2021

#kasExam #kas2021 #questionPaper @spardhaloka
4.8K viewsYaseen M (KCS) @spardhaloka, edited  13:18
Open / Comment
2021-02-14 20:14:05 ದೇಶದಲ್ಲಿನ ರೈತರ ಸಂಕಷ್ಟಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಇಲ್ಲಿ ಹಲವು ಸಂಗತಿಗಳು ಕೆಲಸ ಮಾಡುತ್ತಿವೆ. ಅನಕ್ಷರತೆ, ಗ್ರಾಮೀಣ ಪ್ರದೇಶಗಳಲ್ಲಿನ ಶೋಷಣೆ, ರೈತರನ್ನು ಬ್ಯಾಂಕ್‌ಗಳು ಶೋಷಿಸುವುದು, ರಾಜಕೀಯ ಭ್ರಷ್ಟಾಚಾರ, ಕೃಷಿಯೋಗ್ಯ ಭೂಮಿ ಹಂಚಿ ಹೋಗುತ್ತಿರುವುದು, ತಂಬಾಕು ಮತ್ತು ಮದ್ಯದಿಂದ ಬರುತ್ತಿರುವ ಕಾಯಿಲೆಗಳು, ಹಣದುಬ್ಬರ, ವಿದ್ಯುತ್ ಲಭ್ಯತೆ ಸರಿಯಾಗಿಲ್ಲದಿರುವುದು... ಇವೆಲ್ಲವೂ ರೈತರ ಸಂಕಷ್ಟಕ್ಕೆ ಕೊಡುಗೆ ನೀಡುತ್ತಿವೆ. ಹೊಸ ಕಾಯ್ದೆ ಜಾರಿಗೊಳಿಸುವುದರಿಂದ ಇವನ್ನೆಲ್ಲ ಇಲ್ಲವಾಗಿಸಲು ಸಾಧ್ಯವಿಲ್ಲ.

ಮೋದಿ ನೇತೃತ್ವದ ಸರ್ಕಾರವು ಈ ಮೂರೂ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಸಂಸತ್ತನ್ನು ಕೋರಬೇಕು. ನಂತರ, ಬಿಜೆಪಿ ಆಡಳಿತ ಇರುವ ರಾಜ್ಯಗಳು ಈ ಬಗೆಯ ಕಾಯ್ದೆಗಳನ್ನು ಜಾರಿಗೆ ತಂದು, ತಳಮಟ್ಟದಲ್ಲಿ ಸುಧಾರಣೆ ತಂದು ತೋರಿಸುವಂತೆ ಹೇಳಬೇಕು. ಮೋದಿ ಅವರು ಮಾಡುತ್ತಿರುವುದರ ವಿರುದ್ಧ ಹೋರಾಡಲು ಬಹುತೇಕ ವಿರೋಧ ಪಕ್ಷಗಳಿಗೆ ನೈತಿಕ ಹಕ್ಕಿಲ್ಲ. ಅವು ಕೂಡ ಈ ಹಿಂದೆ ಇಂಥದ್ದೇ ಕಾನೂನುಗಳನ್ನು ಕೇಂದ್ರ ಜಾರಿಗೆ ತರಬೇಕು ಎಂದು ಕೇಳಿದ್ದವು.

ಭಾರತದ ರೈತರ ಸಂಕಷ್ಟಗಳು ಅದೆಷ್ಟು ಬೃಹತ್ ಆಗಿವೆ ಅಂದರೆ, ರಾಜ್ಯ ಅಥವಾ ಕೇಂದ್ರ ಜಾರಿಗೆ ತರುವ ಯಾವುದೇ ಕಾನೂನು ಆ ಸಂಕಷ್ಟಗಳನ್ನು ತೃಪ್ತಿಕರವಾಗಿ ನಿಭಾಯಿಸಲು ಆಗದ ಪರಿಸ್ಥಿತಿ ಇದೆ. ಇಂತಹ ಮಾತು ಆಡಲು ವಿಷಾದವಾಗುತ್ತದೆ ಕೂಡ...

ಲೇಖಕ: ಸುಪ್ರೀಂ ಕೋರ್ಟ್‌ ವಕೀಲ
#editorial #farmer #inNews #kas2021 #ias2021 #generalStudies @spardhaloka
5.4K viewsYaseen M (KCS) @spardhaloka, edited  17:14
Open / Comment
2021-02-14 20:14:05 ★ ರೈತ ಸಮುದಾಯದ ವಿಷಾದ ಸ್ಥಿತಿ

ಕೆ.ವಿ.ಧನಂಜಯ Updated: 13 ಫೆಬ್ರವರಿ 2021, 01:01 IST (ಪ್ರಜಾವಾಣಿ)

ದೆಹಲಿ ಸುತ್ತ ನಡೆಯುತ್ತಿರುವ ರೈತರ ಭಾರಿ ಪ್ರತಿಭಟನೆಯನ್ನು ಜಗತ್ತು ಗಮನಿಸಲಾರಂಭಿಸಿದೆ. ಪ್ರತಿಭಟನೆಯಲ್ಲಿ ತೊಡಗಿದ್ದ 200ಕ್ಕೂ ಹೆಚ್ಚು ರೈತರು ತೀವ್ರ ಚಳಿಯ ಕಾರಣದಿಂದಾಗಿ ಮೃತಪಟ್ಟಿದ್ದಾರೆ ಎಂಬ ವರದಿಗಳಿವೆ.

ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳಿಗೆ ಸಂಸತ್ತು ಅನುಮೋದನೆ ನೀಡಿತು, ರಾಷ್ಟ್ರಪತಿಯವರು ಸೆಪ್ಟೆಂಬರ್‌ನಲ್ಲಿ ಅಂಕಿತ ಹಾಕಿದರು. ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದ ಈ ಮೂರು ಕಾಯ್ದೆಗಳು, ರಾಜ್ಯಗಳು ಕೃಷಿ ಮಾರುಕಟ್ಟೆಗಳ ಮೇಲೆ ವಿಧಿಸಿದ್ದ ಹಲವು ನಿರ್ಬಂಧಗಳನ್ನು ತೆಗೆದುಹಾಕುತ್ತವೆ. ಈ ಕಾಯ್ದೆಗಳು ಕೃಷಿ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನು ತರಬಲ್ಲವು, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ತಂದುಕೊಡಬಲ್ಲವು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ, ಪ್ರತಿಭಟನೆಯಲ್ಲಿ ತೊಡಗಿರುವ ರೈತರಿಗೆ ಈ ಕಾಯ್ದೆಗಳು ಬೇಡವಾಗಿವೆ. ಆಶ್ಚರ್ಯದ ಸಂಗತಿಯೆಂದರೆ, ಕಾಯ್ದೆಗಳ ವಿರುದ್ಧ ಗಟ್ಟಿಯಾದ ಯಾವುದೇ ವಾದವನ್ನು ಆಲಿಸದೆಯೇ ಸುಪ್ರೀಂ ಕೋರ್ಟ್‌, ಕಾಯ್ದೆಗಳ ಜಾರಿಗೆ ತಡೆ ನೀಡಿದೆ! ಚುನಾವಣಾ ಬಾಂಡ್‌, ನೋಟು ಅಮಾನ್ಯೀಕರಣ, ಪೌರತ್ವ ತಿದ್ದುಪಡಿ ಕಾಯ್ದೆಯಂತಹ ವಿಚಾರಗಳಲ್ಲಿ ವಾದ–ಪ್ರತಿವಾದ ಆಲಿಸಿದ ನಂತರವೂ ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡಬೇಕೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನಿಸಿಲ್ಲ, ಪ್ರಕರಣಗಳ ವಿಚಾರಣೆಯನ್ನು ಮುಂದೂಡುತ್ತಾ ಬಂದಿದೆ.

ಸುಪ್ರೀಂ ಕೋರ್ಟ್ ನೀಡಿರುವ ತಡೆಯು ರೈತರಿಗೆ ಸಮಾಧಾನ ತಂದಿಲ್ಲ. ಕಾಯ್ದೆಗಳನ್ನು ಸಂಸತ್ತು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ. ಮಸೂದೆಗಳನ್ನು ಅನುಮೋದಿಸುವಾಗ ರಾಜ್ಯಸಭೆಯಲ್ಲಿ ಹೆಚ್ಚಿನ ಚರ್ಚೆಯೇನೂ ಆಗಲಿಲ್ಲ. ಮತ ವಿಭಜನೆಗೆ
ಕೆಲವು ಸದಸ್ಯರು ಒತ್ತಾಯಿಸಿದರೂ ಅದಕ್ಕೆ ಉಪಸಭಾಪತಿ ಏಕೆ ಒಪ್ಪಲಿಲ್ಲ, ಧ್ವನಿಮತವನ್ನು ಒಪ್ಪಿದ್ದೇಕೆ ಎಂಬುದು ಸ್ಪಷ್ಟವಾಗಿಲ್ಲ.

ಕಾನೂನು ರೂಪಿಸುವ ಅಧಿಕಾರವನ್ನು ನಮ್ಮ ಸಂವಿಧಾನವು ಸಂಸತ್ತಿಗೆ ಅಥವಾ ವಿಧಾನಸಭೆಗಳಿಗೆ ಹಂಚಿಕೆ ಮಾಡಿದೆ. ಕೆಲವು ವಿಷಯಗಳಲ್ಲಿ ಎರಡೂ ಶಾಸನಸಭೆಗಳು ಕಾನೂನು ಮಾಡಬಹುದು. ರಾಜ್ಯಗಳು ರೂಪಿಸಿದ ಕಾನೂನು, ಕೇಂದ್ರದ ಕಾನೂನಿಗೆ ವಿರುದ್ಧವಾಗಿದ್ದರೆ ಸಂಸತ್ತು ರೂಪಿಸಿದ ಕಾನೂನು ಮಾನ್ಯವಾಗುತ್ತದೆ– ಇದಕ್ಕೆ ಕೆಲವು ಅಪವಾದಗಳಿವೆ.

ಕೃಷಿಯು ರಾಜ್ಯ ಪಟ್ಟಿಯಲ್ಲಿರುವ ವಿಷಯ. ಸಂವಿಧಾನ ರೂಪಿಸುವಾಗ, ಕೃಷಿಗೆ ವಿಕೇಂದ್ರೀಕೃತ ವ್ಯವಸ್ಥೆ ಬೇಕು, ಅದಕ್ಕೆ ರಾಜ್ಯಗಳೇ ಸೂಕ್ತ ಎಂಬ ಅಭಿಪ್ರಾಯ ಸಂವಿಧಾನ ರಚಿಸುವವರಲ್ಲಿ ಇತ್ತು. ಏಳನೆಯ ಪರಿಚ್ಛೇದದ ಒಂದನೆಯ ಪಟ್ಟಿಯಲ್ಲಿರುವ 97 ಅಂಶಗಳು, ಸಂಸತ್ತು ಮಾತ್ರ ಕಾನೂನು ರೂಪಿಸಬಹುದಾದ ವಿಷಯಗಳನ್ನು ಹೇಳುತ್ತವೆ. ಇಲ್ಲಿ ಕೃಷಿಯನ್ನು ಕುರಿತು ಕಾನೂನು ರಚಿಸುವ ಅಧಿಕಾರದ ಉಲ್ಲೇಖವಿಲ್ಲ. ಕೃಷಿ ಇರುವುದು ರಾಜ್ಯಗಳ ಪಟ್ಟಿಯಲ್ಲಿ. ಏಳನೆಯ ಪರಿಚ್ಛೇದದ ಎರಡನೆಯ ಪಟ್ಟಿಯಲ್ಲಿರುವ 14ನೇ ಅಂಶವು ‘ವ್ಯವಸಾಯ, ವ್ಯಾವಸಾಯಿಕ ಶಿಕ್ಷಣ, ಬೆಳೆ ನಾಶಕಗಳ ವಿರುದ್ಧ ರಕ್ಷಣೆ ಮತ್ತು ಸಸ್ಯ ರೋಗ’ವನ್ನು ಹೆಸರಿಸುತ್ತದೆ. ಕಾಲಕಾಲಕ್ಕೆ ಕೃಷಿ ಸಾಲಗಳನ್ನು ಮನ್ನಾ ಮಾಡುವ ಉಲ್ಲೇಖವು ರಾಜ್ಯಗಳ ಪಟ್ಟಿಯ 30ನೆಯ ಅಂಶದಲ್ಲಿದೆ. ಹಾಗೆಯೇ, 28ನೆಯ ಅಂಶವು ‘ಮಾರುಕಟ್ಟೆಗಳು ಮತ್ತು ಸಂತೆಗಳ’ ಬಗ್ಗೆ ಮಾತನಾಡುತ್ತದೆ. ಈ ಅಂಶದ ಅಡಿಯಲ್ಲೇ ಬಹುತೇಕ ರಾಜ್ಯಗಳು ಕೃಷಿ ಉತ್ಪನ್ನಗಳ ಮಾರುಕಟ್ಟೆ ಕಾಯ್ದೆಗಳನ್ನು ಅನುಷ್ಠಾನಕ್ಕೆ ತಂದಿವೆ. ಕೃಷಿ ಉತ್ಪನ್ನಗಳ ಮಾರಾಟವು ರಾಜ್ಯ ಸರ್ಕಾರ ನಿಯಂತ್ರಿಸುವ ಮಾರುಕಟ್ಟೆಯಲ್ಲಿ ಮಾತ್ರ ನಡೆಯಬೇಕು ಎಂದು ಈ ಕಾಯ್ದೆ ಹೇಳುತ್ತದೆ. ಆ ಮಾರುಕಟ್ಟೆಯಲ್ಲಿ ಹಾಗೂ ಮಾರುಕಟ್ಟೆಯ ಹೊರಗಡೆ ನಡೆಯುವ ವಹಿವಾಟುಗಳಿಗೆ ಸೆಸ್ ವಿಧಿಸುವ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇರುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿರುತ್ತದೆ– ಆ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಆ ನಿರ್ದಿಷ್ಟ ಉತ್ಪನ್ನ ಖರೀದಿಸಲು ಅವಕಾಶ ಇರುವುದಿಲ್ಲ. ಹೀಗಿದ್ದರೂ, ರಾಜ್ಯಗಳು ರೂಪಿಸಿದ ಈ ಕಾಯ್ದೆಯು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಈ ವ್ಯವಸ್ಥೆಯಲ್ಲಿ ಸುಧಾರಣೆ ಬೇಕಿದೆ ಎಂಬುದು ವಾಸ್ತವ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳುವ ಪ್ರಕಾರ, ಖಾಸಗಿಯವರಿಗೆ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿಸಲು ಅವಕಾಶ ಕಲ್ಪಿಸುವುದು ರೈತರ ಸಂಕಷ್ಟಗಳಿಗೆ ಒಳ್ಳೆಯ ಪರಿಹಾರ. ಕೇಂದ್ರಕ್ಕೂ ರಾಜ್ಯ ಸರ್ಕಾರಗಳಿಗೂ ಕಾನೂನು ರೂಪಿಸಲು ಅವಕಾಶ ಕಲ್ಪಿಸುವ ಮೂರನೆಯ (ಸಮವರ್ತಿ) ಪಟ್ಟಿಯಲ್ಲಿ ಇರುವ 33ನೆಯ ಅಂಶದಲ್ಲಿ ‘ಕೇಂದ್ರದ ಮಧ್ಯಪ್ರವೇಶದ ಅಗತ್ಯವಿದೆ ಎಂದು ಸಂಸತ್ತು ಘೋಷಿಸುವ ಯಾವುದೇ ಉದ್ಯಮದ ಉತ್ಪನ್ನದ ಉತ್ಪಾದನೆ, ಪೂರೈಕೆ ಮತ್ತು ವಿತರಣೆ’ ವಿಚಾರವಾಗಿ ಎಂಬ ವಿವರಣೆ ಇದ್ದು, ಅಲ್ಲಿ ‘ವ್ಯಾಪಾರ ಮತ್ತು ವಾಣಿಜ್ಯ’ ಎಂಬ ಪದಗಳಿವೆ, ಅವು ತನಗೆ ಈ ಕಾಯ್ದೆ ರೂಪಿಸಲು ಅಧಿಕಾರ ನೀಡಿವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಕೇಂದ್ರ ಸರ್ಕಾರ ಮುಂದಿಡುತ್ತಿರುವ ವಾದವು ಮೂರ್ಖನ ಮೇಲೆ ಮಾತ್ರ ಪ್ರಭಾವ ಬೀರಬಲ್ಲದು!

ರಾಜ್ಯಗಳ ಮಟ್ಟದಲ್ಲಿ ಇರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ಎಂಬ ವ್ಯವಸ್ಥೆಯಲ್ಲಿ ವಿಸ್ತೃತ ಹಾಗೂ ಆಮೂಲಾಗ್ರ ಬದಲಾವಣೆಗಳು ಬೇಕು, ಆಗ ರೈತರ ಹಿತಾಸಕ್ತಿ ಕಾಯಲು ಸಾಧ್ಯ ಎಂದು ಮೋದಿ ಅವರು ಹೇಳುವುದರಲ್ಲಿ ತಪ್ಪು ಕಾಣಲು ಸಾಧ್ಯವಿಲ್ಲ. ದೇಶದಲ್ಲಿನ ರೈತರ ಸಂಕಷ್ಟಗಳಿಗೆ ಪರಿಹಾರ ಅಷ್ಟು ಸರಳವಾಗಿ ಇದ್ದಿದ್ದರೆ, ರೈತರಿಂದ ಉತ್ಪನ್ನಗಳನ್ನು ನೇರವಾಗಿ ಖರೀದಿಸಲು ಖಾಸಗಿಯವರಿಗೆ ಅವಕಾಶ ನೀಡುವ ಒಂದು ಹೊಸ ಕಾಯ್ದೆಯನ್ನು ಜಾರಿಗೆ ತಂದು ಅವರ ಸಂಕಷ್ಟನ್ನು ನಿವಾರಿಸಲು ಆಗುತ್ತದೆ ಎಂದಾಗಿದ್ದರೆ, ಅದೇ ಕೆಲಸವನ್ನು ಮೋದಿ ಅವರು ಬಿಜೆಪಿ ಆಡಳಿತ ಇರುವ ಯಾವುದಾದರೂ ರಾ‌ಜ್ಯದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಬಹುದಿತ್ತಲ್ಲವೇ? ಫಲಿತಾಂಶ ಏನಿರುತ್ತದೆ ಎಂಬುದನ್ನು ನೇರವಾಗಿ ಗಮನಿಸಬಹುದಿತ್ತಲ್ಲವೇ?
4.6K viewsYaseen M (KCS) @spardhaloka, edited  17:14
Open / Comment
2021-02-14 20:04:59 ಹಾಲಿನೊಳು ಬೆಣ್ಣೆ ಕಡಲೊಳಗೆ ನೀರ್ಗಲ್ಲವೊಲು |
ತೇಲುವುದಮೇಯಸತ್ಪದಲಿ ಮೇಯಜಗ ||
ಮೂಲದಶೆಯೊಳಗೊಂದು, ಮಾಪನದ ಬಗೆಗೆರಡು |
ಗಾಳಿಯುಸಿರುಗಳಂತೆ – ಮಂಕುತಿಮ್ಮ || 101 ||


ಪದ-ಅರ್ಥ: ನೀರ್ಗಲ್ಲು=ಹಿಮಬಂಡೆ, ತೇಲುವುದಮೇಯಸತ್ಪದಲಿ=ತೇಲುವುದು+ಅಮೇಯ(ಅಳೆಯಲಾರದ)+ಸತ್ಪದಲಿ, ಮೇಯ = ಅಳೆಯಬಹುದಾದ, ಮೂಲದಶೆಯೊಳಗೊಂದು=ಮೂಲದಶೆಯೊಳಗೆ(ಮೂಲದಲ್ಲಿ)+ಒಂದು, ಮಾಪನ=ಅಳತೆ

ವಾಚ್ಯಾರ್ಥ: ಹಾಲಿನಲ್ಲಿ ಬೆಣ್ಣೆ, ಸಮುದ್ರದಲ್ಲಿ ಮಂಜುಗಡ್ಡೆಯಂತೆ ನಮ್ಮ ಅಳತೆಗೆ ಸಿಕ್ಕುವ ಜಗತ್ತು ಅಳೆಯಲಾಗದ ಅಪಾರ ಸತ್ಪದಲ್ಲಿ ತೇಲುತ್ತಿದೆ. ಅವು ಮೂಲದಲ್ಲಿ ಒಂದೇ ಆದರೂ ಅಳತೆಗೆ ಮಾತ್ರ ಎರಡು ಬಗೆಗಳು - ಗಾಳಿ, ಉಸಿರುಗಳಂತೆ

ವಿವರಣೆ: ಹಾಲಿನಲ್ಲೇ ಬೆಣ್ಣೆ ಇದೆ. ಮಧಿಸಿದಾಗ ಹೊರಬರುತ್ತದೆ. ಹಾಲಿನ ಒಂದು ಭಾಗವೇ ಆಗಿದ್ದ ಬೆಣ್ಣೆ ಹೊರಬಂದೊಡನೆ ಹಾಲಿನಲ್ಲಿ ತೇಲತೊಡಗುತ್ತದೆ. ಅದುವರೆಗೂ ಹಾಲಿನಲ್ಲಿ ಸೇರಿಹೋಗಿದ್ದ ಬೆಣ್ಣೆ ಈಗ ಬೇರೆಯಾಗಿ ಹಾಲಿನಲ್ಲಿ ತೇಲುತ್ತದೆ. ಹಾಲು ದ್ರವಪದಾರ್ಥವಾದರೆ ಬೆಣ್ಣೆ ಘನವಸ್ತು. ಹಾಲನ್ನು ಲೀಟರ್ ದಲ್ಲಿ ಅಳೆದರೆ, ಬೆಣ್ಣೆಯನ್ನು ಕಿಲೋ ರೀತಿಯಲ್ಲಿ ಅಳೆಯುತ್ತೇವೆ. ಇದರಂತೆಯೇ ಸಮುದ್ರದ ನೀರು ಧ್ರುವದ ಹತ್ತಿರ ಹೋದಂತೆ ಮರಗಟ್ಟಿ ಮಂಜುಗಡ್ಡೆಯಾಗುತ್ತದೆ, ತಾನು ಹುಟ್ಟಿಬಂದ ನೀರಿನಿಂದಲೇ ಬೇರೆಯಾಗಿ ತೇಲತೊಡಗುತ್ತದೆ. ಎರಡೂ ಮೂಲದಲ್ಲಿ ನೀರೇ ಆದರೂ ನೋಟದಲ್ಲಿ ಬೇರೆಯಾಗಿವೆ, ಅವುಗಳ ಅಳತೆಯ ವಿಧಾನಗಳೂ ಬೇರೆ.

ನಾವಿರುವ ವಿಶ್ವದ ಸ್ಥಿತಿಯೂ ಹೀಗೆಯೇ. ಅದು ಕಣ್ಣಿಗೆ ಕಾಣುತ್ತದೆ, ಅದನ್ನು ಅಳೆಯಬಹುದು. ಅದು ಅಪಾರವಾದ, ಅಳೆಯಸಾಧ್ಯವಾದ ಬ್ರಹ್ಮಸತ್ವದಲ್ಲಿ ತೇಲುತ್ತಿದೆ. ಈ ಸತ್‍ವಸ್ತು ಬಹಳ ದೊಡ್ಡದು, ಅನಂತವಾದದ್ದು. ಅದಕ್ಕಾಗಿಯೇ ಅದು ಸರ್ವವ್ಯಾಪಿ ಎನ್ನುತ್ತೇವೆ. ಅದನ್ನೇ ಬ್ರಹ್ಮ ಎನ್ನುತ್ತೇವೆ. ಬೃಹಿ ಎಂದರೆ ದೊಡ್ಡದು ಎಂದರ್ಥ. ನಮ್ಮ ಅನುಭವಕ್ಕೆ ಬರುವುದು ಪ್ರಕೃತಿ. ನಮ್ಮ ಮನಸ್ಸು, ಬುದ್ಧಿ, ಪ್ರತಿಭೆಗಳನ್ನೆಲ್ಲ ತೋರುವ ಸ್ಥಳ ಜಗತ್ತು. ಆದರೆ ಈ ಜಗದ್‍ರೂಪವಾದ ಪ್ರಪಂಚವನ್ನು ಆವರಿಸಿಕೊಂಡು ಅದರ ಒಳಗೂ, ಹೊರಗೂ ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿರುವುದು ಈ ಅವ್ಯಕ್ತ ಸತ್ವ.

ಹೀಗೆ ಅವ್ಯಕ್ತವಾದ, ಅಮೇಯ ಸತ್ವದ ಮಹಾಸಾಗರದಲ್ಲಿ ಕಣ್ಣಿಗೆ ಕಾಣುವ ಪ್ರಪಂಚವೆಂಬ ನೀರ್ಗಲ್ಲು ತೇಲುತ್ತಿದೆ. ಅದೊಂದು ರೀತಿಯ ಬಲೂನ್ ಇದ್ದ ಹಾಗೆ. ಅದರ ಒಳಗೂ ಗಾಳಿ ಇದೆ, ಹೊರಗೂ ಗಾಳಿಯಿದೆ. ಪ್ರಪಂಚ ಮತ್ತು ಬ್ರಹ್ಮಸತ್ವ ಮೂಲದಲ್ಲಿ ಎರಡೂ ಒಂದೇ. ಪ್ರಪಂಚ ಸೃಷ್ಟಿಯಾದದ್ದೇ ಬ್ರಹ್ಮಸತ್ವದಿಂದ. ಆದರೆ ತೋರಿಕೆಗೆ ಎರಡು ಬಗೆಯಾಗಿವೆ. ಕಗ್ಗ ಮತ್ತೊಂದು ಅತ್ಯದ್ಭುತವಾದ ಉಪಮೆಯನ್ನು ಕೊಡುತ್ತದೆ. ವ್ಯಕ್ತ ಮತ್ತು ಅವ್ಯಕ್ತಗಳೆರಡೂ ಗಾಳಿ ಮತ್ತು ಉಸಿರುಗಳಿದ್ದ ಹಾಗೆ ಎನ್ನುತ್ತದೆ. ನಮ್ಮ ದೇಹದ ಹೊರಗಿರುವುದು ಗಾಳಿ. ಅದು ಎಲ್ಲೆಲ್ಲಿಯೂ ಇದೆ. ಅದರದೊಂದು ಪುಟ್ಟ ಭಾಗ ನಮ್ಮ ಪುಪ್ಪುಸದಲ್ಲಿ ಸೇರಿಕೊಂಡಾಗ ನಾವು ಅದನ್ನು ನನ್ನ ಉಸಿರು ಎನ್ನುತ್ತೇವೆ. ಅದನ್ನು ಹೊರಗೆ ಬಿಟ್ಟಾಗ ಮತ್ತದು ಗಾಳಿಯೇ. ಅದು ಮೂಲತ: ಗಾಳಿಯೇ, ನನ್ನಲ್ಲಿ ಸೇರಿದಾಗ ಅದನ್ನು ಉಸಿರು ಎನ್ನುತ್ತೇವೆ, ಅದೇ ಹೊರಗೆ ಬಂದಾಗ ಗಾಳಿ ಎನ್ನುತ್ತೇವೆ.

ಬ್ರಹ್ಮಸತ್ವದ ಎರಡು ದಶೆಗಳೆಂಬ, ಸುಂದರ ಆಧ್ಯಾತ್ಮಿಕ ಸತ್ಯವನ್ನು ಅತ್ಯಂತ ಸುಲಭವಾಗಿ, ಕಣ್ಣಿಗೆ ಕಟ್ಟುವ ಪ್ರತಿಮೆಗಳೊಂದಿಗೆ ವಿವರಿಸುತ್ತದೆ ಈ ಕಗ್ಗ. (ಪ್ರಜಾವಾಣಿ)
#kannadaGrammar #kas2021 #kannadaLiterature #kannada #mankutimma @spardhaloka
4.1K viewsYaseen M (KCS) @spardhaloka, edited  17:04
Open / Comment
2021-02-14 13:21:47
ಕೆಎಎಸ್ ಮುಖ್ಯ ಪರೀಕ್ಷೆಯ : ಪ್ರಬಂಧ ಪತ್ರಿಕೆ 2020
#kasExam #kas2021 #questionPaper @spardhaloka
5.0K viewsYaseen M (KCS) @spardhaloka, edited  10:21
Open / Comment
2021-02-14 11:10:23 ★ ಪ್ಲಾಸ್ಮೋಡಿಯಂ ಜಾತಿಗೆ ಸೇರಿದ ಪ್ರೋಟೊಸೋವನ್ ಪರಾವಲಂಬಿ ಜೀವಿಯು ಮಲೇರಿಯಾ ರೋಗಕ್ಕೆ ಪ್ರಮುಖ ಕಾರಣ.
5.0K viewsYaseen M (KCS) @spardhaloka, 08:10
Open / Comment