Get Mystery Box with random crypto!

'ಸ್ಪರ್ಧಾಲೋಕ'-'IAS/KAS..in ಕನ್ನಡ'

Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Channel address: @spardhaloka
Categories: Uncategorized
Language: English
Subscribers: 30.17K
Description from channel

"ಐಎಎಸ್ /ಕೆಎಎಸ್ & ಇತರೆ ಪರೀಕ್ಷೆಗಳಿಗಾಗಿ ಕನ್ನಡದಲ್ಲಿ ವಿಸ್ತೃತ ನೋಟ್ಸ್ "(IAS/KAS Notes in Kannada) Admins-
@yaseen7ash
@Prithvidevgowda
★Blog Link— https://www.spardhaloka.blogspot.in/
★FaceBook link— https://m.facebook.com/spardhaloka.blogspot.in/

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

1

2 stars

0

1 stars

1


The latest Messages 2

2021-02-23 07:12:35 32. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ನೀಡಲಾಗುವ ಅತ್ಯನ್ನುತ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ. ಇದು ಭಾರತೀಯ ಸಂವಿಧಾನದ 8ನೇ ಷೆಡ್ಯೂಲ್‌ನಲ್ಲಿ ಸೂಚಿತವಾಗಿರುವ ಭಾರತೀಯ ಭಾಷೆಗಳ ಲೇಖಕರಿಗೆ ಮಾತ್ರ ಈ ಪ್ರಶಸ್ತಿ ಮೀಸಲು. ಈವರೆಗೆ ಹಿಂದಿ ಭಾಷೆಯ 11 ಸಾಹಿತಿಗಳು ಜ್ಞಾನಪೀಠ ಪುರಸ್ಕೃತರಾಗಿದ್ದರೆ, ಕನ್ನಡ 8 ಸಾಹಿತಿಗಳು ಈ ಗೌರವಕ್ಕೆ ಪಾತ್ರರಾಗಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಈ ಪ್ರಶಸ್ತಿಯು ನಗದು ಜತೆಗೆ ಕಂಚಿನ ಸರಸ್ವತಿಯ ಕಂಚಿನ ಪ್ರತಿಕೃತಿ ಮತ್ತು ಫಲಕವನ್ನು ಒಳಗೊಂಡಿದೆ.
1.0K viewsYaseen M (KCS) @spardhaloka, 04:12
Open / Comment
2021-02-23 07:12:35 30. ನಮ್ಮಲ್ಲಿರುವ 250 ರಾಜ್ಯಸಭಾ ಸ್ಥಾನಗಳ ಪೈಕಿ 12 ಜನರನ್ನು ಸಚಿವರ ಸಮಿತಿಯ ಸಲಹೆಯ ಮೇರೆಗೆ ರಾಷ್ಟ್ರಪತಿ ನೇರವಾಗಿ ಆಯ್ಕೆ ಮಾಡುತ್ತಾರೆ. ವಿವಿಧ ರಂಗಗಳಲ್ಲಿನ ಸಾಧಕರನ್ನು ಇದಕ್ಕೆ ಪರಿಗಣಿಸಲಾಗುತ್ತದೆ. ಇನ್ನು ಉಳಿದ 238 ಸ್ಥಾನಗಳಿಗೆ ರಾಜ್ಯಗಳ ವಿಧಾನಸಭೆಗಳಿಂದ ಅಭ್ಯರ್ಥಿಗಳನ್ನು ಚುನಾಯಿಸಲಾಗುತ್ತದೆ.

ಪ್ರತಿ ರಾಜ್ಯದಿಂದ ಎಷ್ಟು ಅಭ್ಯರ್ಥಿಗಳನ್ನು ರಾಜ್ಯಸಭೆಗೆ ನಿಗದಿ ಮಾಡಬೇಕು ಎಂಬುದನ್ನು ಆಯಾ ರಾಜ್ಯದ ಜನಸಂಖ್ಯೆ ಆಧರಿಸಿ ನಿರ್ಧರಿಸಲಾಗಿದೆ. ಸಣ್ಣ ರಾಜ್ಯಗಳಿಂದ ಕನಿಷ್ಠ ಒಬ್ಬ ಪ್ರತಿನಿಧಿಯಾದರೂ ಇರಬೇಕು ಎಂಬ ನಿಯಮ ಅಡಕವಾಗಿದೆ.
@spardhaloka
1.0K viewsYaseen M (KCS) @spardhaloka, 04:12
Open / Comment
2021-02-23 07:12:35 [https://spardhaloka.blogspot.in/2018/02/1-2-recommendations-of-woods-despatch.html?m=1]
1.0K viewsYaseen M (KCS) @spardhaloka, 04:12
Open / Comment
2021-02-23 07:12:35 [https://spardhaloka.blogspot.in/2018/02/4-biomagnication.html?m=1]
1.1K viewsYaseen M (KCS) @spardhaloka, 04:12
Open / Comment
2021-02-23 07:12:35 [https://spardhaloka.blogspot.in/2018/02/equatorial-low-pressure-area-or-inter.html?m=1]
1.1K viewsYaseen M (KCS) @spardhaloka, 04:12
Open / Comment
2021-02-23 07:12:35 [https://spardhaloka.blogspot.in/2018/02/weather-and-climate.html?m=1]
1.1K viewsYaseen M (KCS) @spardhaloka, 04:12
Open / Comment
2021-02-23 05:50:54 ಹೂಡಿಕೆದಾರ ಅಮೇರಿಕಾ ಸರಕಾರಕ್ಕೆ ಸಾಲ ಕೊಟ್ಟ ಹಾಗೆ, ಬದಲಿಗೆ ಒಂದು ಪೇಪರ್ ನಲ್ಲಿ ಇಷ್ಟು ಹಣವನ್ನ ಪಡೆದಿದ್ದೇನೆ ಇಷ್ಟು ವರ್ಷದ ನಂತರ ಬಡ್ಡಿ ಸೇರಿ ಇಷ್ಟು ಹಣವನ್ನ ನೀಡತ್ತೇನೆ ಎಂದು ಅಮೇರಿಕಾ ಸರಕಾರ ಬರೆದು ಕೊಟ್ಟಿರುವ ಮುಚ್ಚಳಿಕೆ ಪತ್ರ. ಇದು ಒಂದೆರೆಡು ವರ್ಷವಾದರೆ ಹೇಗಾದರೂ ಸಂಭಾಳಿಸಬಹುದು, ಆದರೆ ಕಳೆದ ಐವತ್ತು ವರ್ಷದಿಂದ ಇದೆ ರೀತಿ ನಡೆದು ಬರುತ್ತಿದೆ.

ಗಮನಿಸಿ ಮೊದಲ ವರ್ಷದ ಸಾಲಪತ್ರ ಅಥವಾ ಬಾಂಡ್ 3 ವರ್ಷ ಅಥವಾ 5 ವರ್ಷದ ನಂತರ ವಾಪಸ್ಸು ನೀಡಬೇಕು. ಹೀಗೆ ಮರಳಿ ನೀಡಲು ಮುಂದಿನ ವರ್ಷಗಳಲ್ಲಿ ಖರ್ಚಿಗಿಂತ ಆದಾಯ ಹೆಚ್ಚಾಗಿರಬೇಕು. ಆದರೆ ಪ್ರತಿ ವರ್ಷವೂ ಖರ್ಚು ಆದಾಯಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಪ್ರತಿ ಮೂರು ಅಥವಾ ಐದನೇ ವರ್ಷ ಆ ವರ್ಷದ ಡೆಫಿಸಿಟ್ ಎಷ್ಟಿದೆ ಅದರ ಜೊತೆಗೆ ಪ್ರಥಮ ವರ್ಷದ ಸಾಲವನ್ನ ಹಿಂತಿರುಗಿಸಲು ಎಷ್ಟು ಬೇಕು ಅಷ್ಟು ಹೊಸ ಸಾಲ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಹೀಗಾಗಿ ವರ್ಷದಿಂದ ವರ್ಷಕ್ಕೆ ಸಾಲದ ಮೊತ್ತ ಹೆಚ್ಚಾಗುತ್ತಾ ಹೋಗಿದೆ. ಇದನ್ನ ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆಯನ್ನ ನೋಡೋಣ.

1971ರಲ್ಲಿ 3 ಡಾಲರ್ ಕೊರತೆಯಿತ್ತು ಎಂದುಕೊಳ್ಳೋಣ. ಇದನ್ನ ಡೆಟ್ ಬಾಂಡ್ ವಿತರಿಸುವ ಮೂಲಕ ಪಡೆದುಕೊಂಡು ಆ ವರ್ಷದ ಖರ್ಚನ್ನ ನಿಭಾಯಿಸಿದ್ದಾಯ್ತು. ಆದರೆ ಈ ಮೂರು ಡಾಲರ್ ಜೊತೆಗೆ ಐವತ್ತು ಸೆಂಟ್ಸ್ ಸೇರಿ ಒಟ್ಟು ಮೂರುವರೆ ಡಾಲರ್ ನ್ನು 1974ರಲ್ಲಿ ಮರಳಿ ನೀಡಬೇಕಾಗುತ್ತದೆ. 72ರಲ್ಲಿ ಮತ್ತೆ 3 ಡಾಲರ್ ಕೊರತೆ, 73ರಲ್ಲಿ ಮತ್ತೆ ಕೊರತೆ, 74ರಲ್ಲಿ ಮರಳಿ ನೀಡಬೇಕಾದ ಮೂರವರೇ ಡಾಲರ್ ಜೊತೆಗೆ ಈ ವರ್ಷದ ಕೊರತೆಯನ್ನ ಕೂಡ ಸಾಲ ಎತ್ತುವುದರ ಮೂಲಕ ಸರಿದೂಗಿಸುವ ಕೆಲಸ ಮಾಡಬೇಕಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಪ್ರಥಮ ವರ್ಷ ಕೇವಲ ಇಬ್ಬರು ಹೂಡಿಕೆದಾದರು ಸಾಕಾಗಿತ್ತು. ಎರಡನೇ ವರ್ಷ ನಾಲ್ಕು, ಮೂರನೇ ವರ್ಷಕ್ಕೆ ಎಂಟು, ನಾಲ್ಕನೇ ವರ್ಷಕ್ಕೆ ಹದಿನಾರು, ಹತ್ತನೇ ವರ್ಷಕ್ಕೆ 1024, ಹೀಗೆ 18 ವರ್ಷದ ವೇಳೆಗೆ ಎರಡೂವರೆ ಲಕ್ಷಕ್ಕೂ ಮೀರಿದ ಹೂಡಿಕೆದಾರರ ಅವಶ್ಯಕತೆ ಇರುತ್ತದೆ. ಐವತ್ತನೇ ವರ್ಷಕ್ಕೆ ಎಷ್ಟಾಗಬಹುದು? ನೀವೇ ಲೆಕ್ಕ ಮಾಡಿ. ಇದರ ಅರ್ಥ ಬಹಳ ಸರಳ. ಇದೊಂದು ಡೆಟ್ ಟ್ರ್ಯಾಪ್. ಇದರಿಂದ ಎಂದೆಂದಿಗೂ ಮರಳಿ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವೇ ಇಲ್ಲ. ಇದೆಲ್ಲ ಮರೆತು ಬಿಡೋಣ ಹೊಸ ಹಣಕಾಸು ವ್ಯವಸ್ಥೆ ಕಟ್ಟಿಕೊಳ್ಳೋಣ ಎನ್ನುವ ಹೊಸ ಒಪ್ಪಂದವಾದರೆ ಮಾತ್ರ ಸರಿ, ಇಲ್ಲದಿದ್ದರೆ ಈ ವ್ಯವಸ್ಥೆ ಹೆಚ್ಚು ವರ್ಷ ಮುಂದುವರಿಯಲು ಖಂಡಿತ ಸಾಧ್ಯವಿಲ್ಲ. ಹೀಗೆ ಯಾರಿಂದ ಸಾಲ ಪಡೆದರು ಅವರಿಗೆ ಮರಳಿ ಹಣವನ್ನ ವಾಪಸ್ಸು ನೀಡುವುದು ಕೂಡ ಸಾಧ್ಯವಿಲ್ಲದ ಮಾತು. ಇವತ್ತು ವಿತ್ತ ಪ್ರಪಂಚ ಅದೆಂತಹ ಹುಚ್ಚು ಪರಿಸ್ಥಿತಯಲ್ಲಿದೆ ಎಂದರೆ ನೀವೇ ಕೊಟ್ಟ ಹಳೆ ಸಾಲವನ್ನ ಮರಳಿ ಪಡೆಯಲು ನೀವೇ ಹೊಸ ಸಾಲ ನೀಡಬೇಕು ಅಂತಹ ಪರಿಸ್ಥಿತಿ. ಅಮೇರಿಕಾದಿಂದ ಕೊಟ್ಟ ಸಾಲವನ್ನ ವಾಪಸ್ಸು ಪಡೆಯಲು ಚೀನಾ, ಜಪಾನ್ ಸೇರಿದಂತೆ ಇತರೆ ದೇಶಗಳು ಅವರು ಅವರಿಗೆ ಹೊಸ ಸಾಲವನ್ನ ನೀಡಬೇಕಾಗಿದೆ. ಹೊಸ ಸಾಲ ಹುಟ್ಟದಿದ್ದರೆ ವ್ಯವಸ್ಥೆ ಕುಸಿಯುತ್ತದೆ. ವ್ಯವಸ್ಥೆಯನ್ನ ಜೀವಂತವಾಗಿಡಲು ಹೊಸ ಸಾಲ, ಮತ್ತಷ್ಟು ಸಾಲ, ಹೆಚ್ಚೆಚ್ಚು ಸಾಲ ಮಾಡುತ್ತಿರಲೇಬೇಕು. ಇಂತಹ ಕ್ರಿಯೆಗೆ ಪೊಂಝಿ ಸ್ಕೀಮ್ ಎನ್ನುತ್ತಾರೆ. ಮೂಲ ಹಣ ಎಂದೂ ಮರಳಿ ಬರಲಾರದ ವ್ಯವಸ್ಥೆಯಿದು. ಆಶ್ಚರ್ಯವೆಂದರೆ ಇಂದಿಗೂ ಅಮೆರಿಕನ್ ಡೆಟ್ ಬಾಂಡ್ ಕೊಳ್ಳಲು ಜನ ಮುಗಿಬೀಳುತ್ತಾರೆ. ಇಷ್ಟು ಲೋಪವಿರುವ ವ್ಯವಸ್ಥೆಯಲ್ಲಿನ ಹೂಡಿಕೆ ಅತ್ಯುತ್ತಮ ಎನ್ನುವ ನಂಬಿಕೆಯನ್ನ ಅವರು ನೀಡಿದ್ದು ಅವರ ಮಹಾನ್ ಸಾಧನೆ.

ಹೀಗೆ ಅಮೆರಿಕನ್ ಅರ್ಥ ವ್ಯವಸ್ಥೆಯನ್ನ ನಕಲು ಮಾಡಿದ ವಿಶ್ವದ ಎಲ್ಲಾ ದೇಶಗಳ ಕಥೆ ಕೂಡ ಇಂದಿಗೆ ಸೇಮ್. ಅಮೇರಿಕಾ ಯಾವ ಸ್ಥಿತಿಯಲ್ಲಿದೆ ಅದರ ಅಕ್ಕಪಕ್ಕದಲ್ಲಿ ಜಗತ್ತಿನ ಎಲ್ಲಾ ದೇಶಗಳ ಸ್ಥಿತಿ ಕೂಡ ಅಡ್ಡಾಡುತ್ತಿದೆ. 196 ದೇಶಗಳಲ್ಲಿ ಕೇವಲ 30 ದೇಶಗಳು ಬಜೆಟ್ ಸರ್ಪ್ಲಸ್ ಹೊಂದಿವೆ, ಉಳಿದವುಗಳ ಕಥೆ ಅಮೇರಿಕಾ ಕಥೆ ಹೆಚ್ಚು ಕಡಿಮೆ ಸೇಮ್.

ಇದು 2019 ರ ಅಂತ್ಯದ ವರೆಗಿನ ಕಥೆ. 2020 ರಲ್ಲಿ ಕೊರೋನ ಜಗತ್ತಿನ ಆರ್ಥಿಕತೆಯನ್ನ ಅಲ್ಲೋಲಕಲ್ಲೋಲ ಮಾಡಿಬಿಟ್ಟಿದೆ. ಜಗತ್ತಿನ ಆರ್ಥಿಕತೆ ರಿಸೆಟ್ ಬಟನ್ ಒತ್ತುವವರಿಗಾಗಿ ಕಾಯುತ್ತಿದೆ. ಎರಡನೇ ಮಹಾಯುದ್ಧದ ನಂತರ ಅಂದಿನ ಜಗತ್ತಿನ ಶಕ್ತಿ ಕೇಂದ್ರಗಳು ಕುಳಿತು ಮಾಡಿಕೊಂಡ ಒಪ್ಪಂದ ಅಂದಿನ ದಿನದಲ್ಲಿ ಜಗತ್ತಿನಲ್ಲಿ ಒಂದಷ್ಟು ಸ್ಥಿರತೆಯನ್ನ ನೀಡಿದ್ದು ನಿಜ. ಇದೀಗ ಮತ್ತೆ ಅಂತಹ ಒಂದು ಹೊಸ ಒಪ್ಪಂದದ ಅವಶ್ಯಕತೆಯಿದೆ. ಜಗತ್ತು ಇಂದು ಆರ್ಥಿಕ ಸ್ಥಿರತೆಯನ್ನ ಬಯಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಮಾತುಕತೆಯನ್ನ ಆದಷ್ಟು ಬೇಗ ಪ್ರಾರಂಭಿಸಬೇಕು. ಆದರೆ ಇಂದು ಜಗತ್ತು ಒಡೆದ ಮನೆಯಾಗಿದೆ. ಒಪ್ಪಂದದ ಬಗ್ಗೆ ಮಾತನಾಡಬೇಕಾದ ಸಮಯದಲ್ಲಿ ಇನ್ನಷ್ಟು ಒಡುಕಿನ ಮಾತುಗಳಾಗುತ್ತಿವೆ.

ಕೊನೆ ಮಾತು: ನಿಮಗೆ ಕವಿರತ್ನ ಕಾಳಿದಾಸ ಚಲಚಿತ್ರದಲ್ಲಿ ಕಾಳಿದಾಸನಾಗುವ ಮುನ್ನ ಆತ ತಾನು ಕುಳಿತ ಮರದ ಕೊಂಬೆಯನ್ನ ಕಡಿಯುತ್ತಿದ ದೃಶ್ಯ ನೆನಪಿದೆಯಾ? ಆತ ಮಾಡುತ್ತಿದ್ದದ್ದು ಎಂತಹ ಬುದ್ಧಿಯಿಲ್ಲದ ಕೆಲಸ ಎನ್ನುವುದು ನಿಮಗೆ ಗೊತ್ತು. ಇವತ್ತು ನಮ್ಮ ಅರ್ಥ ವ್ಯವಸ್ಥೆ ಥೇಟ್ ಕಾಳಿದಾಸನಾಗುವುದಕ್ಕಿಂತ ಮುಂಚಿನ ವ್ಯಕ್ತಿಯ ಬುದ್ಧಿಮತ್ತೆಯನ್ನ ಹೊಂದಿದೆ. ಎಚ್ಚೆತ್ತುಕೊಂಡು ಬುದ್ಧಿ ಕಲಿಯದಿದ್ದರೆ ಮರದಿಂದ ಬೀಳುವುದನ್ನ ಯಾರು ತಾನೇ ತಪ್ಪಿಸಲು ಸಾಧ್ಯ? ಕೆಲವು ಮನುಷ್ಯರ ದುರಾಸೆ, ಅಧಿಕಾರದ ಹಪಾಹಪಿ ಜಗತ್ತನ್ನ ಎಲ್ಲಿಗೆ ಕೊಂಡೊಯ್ಯುವುದೋ ಕಾಲವೇ ಉತ್ತರಿಸಲಿದೆ.
#editorial #mainsPreparation #modelQ&A #innews @spardhaloka
513 viewsYaseen M (KCS) @spardhaloka, 02:50
Open / Comment
2021-02-23 05:50:54 ★ ಜಾಗತಿಕ ಹಣಕಾಸಿನ ಇಂದಿನ ಸ್ಥಿತಿ ಬಗ್ಗೆ ಪಕ್ಷಿ ನೋಟ! (World Economic Situation) (ಹಣಕ್ಲಾಸು) (ಕನ್ನಡ ಪ್ರಭ)
-ರಂಗಸ್ವಾಮಿ ಮೂಕನಹಳ್ಳಿ
Published: 18th February 2021 03:50 AM | Last Updated: 18th February 2021 03:50 AM | A+A A-

ನೀವು ಜಗತ್ತಿನ ಇತಿಹಾಸವನ್ನ ಗಮನಿಸುತ್ತಾ ಬನ್ನಿ. ಹಣಕಾಸು ವ್ಯವಸ್ಥೆ ತೀರಾ ಇತ್ತೀಚಿನದು ಎನ್ನುವ ಅರಿವು ನಿಮ್ಮದಾಗುತ್ತದೆ.

ಇವತ್ತು ನಾವು ವೃತ್ತಿ ನಿರತ ಸಂಸ್ಥೆಗಳನ್ನ ಸೃಷ್ಟಿಸಿದ್ದೇವೆ ಎನ್ನುವ ಹೆಮ್ಮೆ ನಮಗೆಲ್ಲಾ ಇದೆ. ಆದರೆ ಇಂತಹ ಸಂಸ್ಥೆಗಳಲ್ಲಿ ದುಡಿಯುವ ಅಥವಾ ಇಂತಹ ಸಂಸ್ಥೆಗಳನ್ನ ಮುನ್ನಡೆಸುವ ವ್ಯಕ್ತಿಗಳು ಕೂಡ ಮುಂದೇನಾಗಬಹುದು ಎನ್ನುವ ಅರಿವಿಲ್ಲದೆ ಅಥವಾ ಅರಿವಿದ್ದರೂ ಅದನ್ನ ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದರ ಪರಿಣಾಮ ನಾವು ಇಂದು ಜಗತ್ತಿನಲ್ಲಿ ಇಷ್ಟು ದೊಡ್ಡ ಮಟ್ಟದ ಅಸ್ಥಿರತೆಯನ್ನ ಕಾಣುತ್ತಿದ್ದೇವೆ.

ಎರಡನೇ ಮಹಾಯುದ್ಧದ ನಂತರ ಜಾಗತಿಕ ಶಕ್ತಿ ದೇಶಗಳು ಒಂದು ಸಭೆಯನ್ನ ಕರೆದವು. ಜಾಗತಿಕ ಹಣಕಾಸು ಸ್ಥಿತಿ ಅಂದಿಗೆ ಹದಗೆಟ್ಟುಹೋಗಿತ್ತು. ಜಗತ್ತಿನ ಎಲ್ಲಾ ದೇಶಗಳೂ ಒಂದಷ್ಟು ಸ್ಥಿರತೆಯನ್ನ ಬಯಸುತ್ತಿದ್ದವು. ಹೀಗಾಗಿ ಅಂದಿನ ದಿನದಲ್ಲಿ ಅತಿ ಹೆಚ್ಚು ಚಿನ್ನದ ಸಂಗ್ರಹ (ಗೋಲ್ಡ್ ರಿಸರ್ವ್) ಹೊಂದಿದ್ದ ಅಮೆರಿಕಾ ದೇಶದ ಕರೆನ್ಸಿ ಡಾಲರ್ನನ್ನ ಜಾಗತಿಕ ಹಣವನ್ನಾಗಿ ಬಳಸಲು ಸಮ್ಮತಿಯನ್ನ ಸೂಚಿಸುತ್ತವೆ. ಇದು 1971ರ ವರೆಗೆ ಚೆನ್ನಾಗಿಯೇ ನಡೆದುಕೊಂಡು ಬರುತ್ತದೆ.

ಗಮನಿಸಿ ಎರಡರಿಂದ ಮೂರು ದಶಕ ಕಳೆಯುವುದರಲ್ಲಿ ಅಮೆರಿಕಾ ಸಾಕಷ್ಟು ಅಭಿವೃದ್ಧಿ ಹೊಂದಿದ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತದೆ. ಇಲ್ಲಿಯವರೆಗೆ ಚಿನ್ನದ ಸಂಗ್ರಹ ಎಷ್ಟಿದೆ ಎನ್ನುವುದರ ಆಧಾರದ ಮೇಲೆ ಡಾಲರನನ್ನ ಮುದ್ರಿಸಲಾಗುತ್ತಿತ್ತು. ಅನಾಯಾಸವಾಗಿ ಜಾಗತಿಕ ಹಣವಾಗಿ ರೂಪುಗೊಂಡ ಡಾಲರ್ ನ್ನು ಬಳಸಿಕೊಂಡು ಅಮೆರಿಕಾದ ಹಣಕಾಸು ತಜ್ಞರು, ರಾಜಕಾರಿಣಿಗಳು, ಇತರೆ ಅಧಿಕಾರಿಗಳು ಚಿನ್ನದ ಸಂಗ್ರಹಣೆಗೆ ಒಪ್ಪಿಕೊಂಡಿದ್ದ ಅನುಪಾತ ಮೀರಿ ಹಣವನ್ನ ಮುದ್ರಿಸಿದರು. ಗಮನಿಸಿ ನೋಡಿ ಡಾಲರ್ನಲ್ಲಿ ವಹಿವಾಟು ನಡೆಸುವ ಕಾರಣ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ನಿಗದಿಯಾದ ಮೌಲ್ಯದ ವಸ್ತುವನ್ನ ಪಡೆಯಲು ಚಿನ್ನವನ್ನ ಸಾಗಿಸುವ ಪ್ರಯಾಸವನ್ನ ತಪ್ಪಿಸುವುದಾಗಿತ್ತು. ಚಿನ್ನ ಅಮೆರಿಕಾದ ಫೆಡರಲ್ ಬ್ಯಾಂಕಿನಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು. ಹೀಗಾಗಿ ಡಾಲರ್ ಚಿನ್ನ ಅಲ್ಲಿದೆ ಎನ್ನುವ ನಂಬಿಕೆಯನ್ನ ನೀಡುವ ಒಂದು ಕರಾರು ಪತ್ರ ಅಥವಾ ಪ್ರಾಮಿಸರಿ ಪೇಪರ್ ನಂತೆ ಬಳಕೆಯಾಗುತ್ತಿತ್ತು. ಯಾವಾಗ ಅಮೆರಿಕ ಚಿನ್ನದ ಸಂಗ್ರಹಣೆ ಮೀರಿ ಹಣವನ್ನ ಮುದ್ರಿಸಿತು ಅದು ಒಂದಷ್ಟು ವರ್ಷದಲ್ಲಿ ಜಗತ್ತಿನ ಇತರ ರಾಷ್ಟ್ರಗಳ ಗಮನಕ್ಕೆ ಬಂದಿತು. ಅವರು ತಮ್ಮ ಬಳಿಯಿದ್ದ ಡಾಲರ್ನನ್ನ ಮರಳಿಸಿ ಅಷ್ಟು ಮೌಲ್ಯದ ಚಿನ್ನವನ್ನ ನೀಡುವಂತೆ ದುಂಬಾಲು ಬಿದ್ದವು. 100 ಡಾಲರ್ ಮೌಲ್ಯದ ಚಿನ್ನವಿದ್ದರೆ 2೦೦ ಮೌಲ್ಯದ ಡಾಲರ್ ಚಾಲನೆಯಲ್ಲಿದೆ. ಈಗ ಎಲ್ಲರೂ ಚಿನ್ನವನ್ನ ನೀಡಿ ಎಂದರೆ ಇಲ್ಲದ ಚಿನ್ನವನ್ನ ತರುವುದು ಎಲ್ಲಿಂದ? ಹೀಗಾಗಿ 1971ರಲ್ಲಿ ಡಾಲರ್ ಮುದ್ರಣಕ್ಕೆ ಇದ್ದ ಚಿನ್ನದ ಸಂಗ್ರಹಣೆ ಮೌಲ್ಯ ಮಾಪನ ಪದ್ಧತಿಯನ್ನ ರದ್ದುಗೊಳಿಸಲಾಯಿತು. ಇದು ಕೇವಲ ತಾತ್ಕಾಲಿಕ ಎನ್ನುವ ಘೋಷಣೆಯನ್ನ ಸಹ ಹೊರಡಿಸಲಾಯಿತು. 2021ಕ್ಕೆ ಬರೋಬ್ಬರಿ 50 ವರ್ಷವಾಯಿತು, ತಾತ್ಕಾಲಿಕ ಎಂದ ರದ್ದತಿಯನ್ನ ಇನ್ನೂ ಮುಂದುವರಿಸಿಕೊಂಡು ಬರುತ್ತಿದ್ದೇವೆ.

ಇದರಿಂದ ಸಮಾಜದಲ್ಲಿ ಬಹಳಷ್ಟು ಬದಲಾವಣೆಯಾಯ್ತು. ನೀವೇ ಗಮನಿಸಿ ನೋಡಿ 1950 ರಿಂದ 1970ರ ವರೆಗೆ ಮತ್ತು ಅದಕ್ಕೂ ಮುಂಚೆ ಜಗತ್ತಿನೆಲ್ಲೆಡೆ ಸಾಮಾನ್ಯವಾಗಿ ಪುರುಷ ಮನೆಯ ಹೊರಗಡೆ ದುಡಿದು ತರುವುದು ಪದ್ಧತಿಯಾಗಿತ್ತು. ಮಹಿಳೆ ಮನೆಯನ್ನ ತೂಗಿಸಿಕೊಂಡು ಹೋಗುವ ಕಾರ್ಯವನ್ನ ವಹಿಸಿಕೊಂಡಿದ್ದಳು. 1950ರಿಂದ ಮೇಲ್ಪಟ್ಟು ಅಮೇರಿಕಾ ಅತ್ಯಂತ ವೇಗದಲ್ಲಿ ಅಭಿವೃದ್ದಿಯನ್ನ ಕಾಣ ತೊಡಗಿತು. ಯಾವಾಗ ಅಭಿವೃದ್ಧಿ ಹೆಚ್ಚಾಯಿತು, ಜನರ ಕೈಯಲ್ಲಿ ಹಣದ ಹರಿವೂ ಹೆಚ್ಚಾಯ್ತು. ಅದರ ಜೊತೆಗೆ ಆದಾಯವನ್ನ ಮೀರಿದ ಖರ್ಚು ಕೂಡ ಹೆಚ್ಚಾಗುತ್ತಾ ಹೋಯ್ತು. ಅದು ನಮ್ಮ ಗಣನೆಗೆ ಬರಲಿಲ್ಲ. 1970 ರ ನಂತರ ಒಂದು ಆದಾಯದಲ್ಲಿ ಮನೆ ನಡೆಸುವುದು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಖರ್ಚು ಹೆಚ್ಚಾಯ್ತು. ಮನೆಯಿಲ್ಲಿದ್ದ ಗೃಹಿಣಿ ಕೂಡ ಹೊರಗೆ ಬಂದು ದುಡಿಯಲು ಶುರು ಮಾಡಿದಳು. ಇಲ್ಲಿಯವರೆಗೂ ಪರವಾಗಿಲ್ಲ ಎನ್ನಬಹುದು. 1971ರ ನಂತರ ಅಮೇರಿಕಾ ಇಲ್ಲಿಯವರಿಗೆ ಬಜೆಟ್ ಡೆಫಿಸಿಟ್ ನಲ್ಲಿ ಸಾಗುತ್ತ ಬಂದಿದೆ. ಅಂದರೆ ತನ್ನ ದೇಶವನ್ನ ನಡೆಸಲು ಬೇಕಾವಷ್ಟು ಆದಾಯ ಅದರ ಬಳಿ ಕಳೆದ ಐವತ್ತು ವರ್ಷದಿಂದ ಇಲ್ಲ. ಹೀಗೆ ಬೇಕಾದ ಹಣವನ್ನ ಅದು ಸಾಲದ ರೂಪದಲ್ಲಿ ಪಡೆಯುತ್ತದೆ. ಸರಕಾರ ನಡೆದ ದಾರಿಯಲ್ಲಿ ಜನತೆ ಕೂಡ ನಡೆದರು. 1990ರ ನಂತರ ಇಬ್ಬರ ಸಂಪಾದನೆ ಕೂಡ ಸಾಲದಾಯಿತು. ಹೀಗಾಗಿ ಇಂದಿನ ಬದುಕಿಗೆ ಮುಂದಿನ ಹತ್ತಾರು ವರ್ಷ ದುಡಿಯಬಹುದಾದ ಸಂಭ್ಯಾವ ಹಣವನ್ನ ಸಾಲದ ರೂಪದಲ್ಲಿ ಪಡೆದು ಖರ್ಚು ಮಾಡಲಾಯಿತು. ಹೀಗೆ ಸಾಲವೇ ಹಣ, ಸಾಲವೇ ಬದುಕು ಎನ್ನುವ ರೀತಿಯಲ್ಲಿ ಅಮೇರಿಕಾ ಹಣಕಾಸು ವ್ಯವಸ್ಥೆ ಬದಲಾಗಿ ಹೋಯಿತು.

ಪೊಂಝಿ ಸ್ಕೀಮ್ ಸೃಷ್ಟಿಗೆ ಕಾರಣವಾದ ಅಮೇರಿಕಾ ಡೆವಲಪ್ಮೆಂಟ್ ಮಾಡೆಲ್.
ಅಮೇರಿಕಾ ಅರ್ಥ ವ್ಯವಸ್ಥೆಯನ್ನ ಹೇಳುವ ಉದ್ದೇಶ ಬಹಳ ಸರಳ. ಅಮೆರಿಕಾದ ಯಶೋಗಾಥೆಯನ್ನ ನೋಡಿ ಜಗತ್ತು ಅವರನ್ನ ಹಿಂಬಾಲಿಸ ತೊಡಗಿತು. 2007 ವೇಳೆಗೆ ಅಮೇರಿಕಾ ತಾನು ಮಾಡಿದ ತಪ್ಪಿಗೆ ಅತಿ ದೊಡ್ಡ ಬೆಲೆಯನ್ನ ಕಟ್ಟಿತು. ಅದು ಜಗತ್ತಿನ ಮಹಾನ್ ಆರ್ಥಿಕ ಕುಸಿತಕ್ಕೂ ಕಾರಣವಾಯಿತು.

ಮೇಲಿನ ಸಾಲಿನಲ್ಲಿ ಉಲ್ಲೇಖಿಸಿದಂತೆ 1971 ರಿಂದ ಈಚೆಗೆ ಅಮೇರಿಕಾ ಬಜೆಟ್ ಡೆಫಿಸಿಟ್ ನಲ್ಲಿ ನಡೆದು ಬರುತ್ತಿದೆ. ಅಂದರೆ ಗಮನಿಸಿ ಒಟ್ಟು ಆದಾಯ ನೂರು ಡಾಲರ್ ಎಂದುಕೊಂಡರೆ ಒಟ್ಟು ಖರ್ಚು ನೂರಾ ಮೂರು ಅಥವಾ ನೂರಾ ನಾಲ್ಕು ಡಾಲರ್ ಎಂದುಕೊಳ್ಳಿ. ಹೀಗೆ ಕೊರತೆಯಾಗಿರುವ 3 ಅಥವಾ 4 ಡಾಲರ್ ಹಣವನ್ನ ಬಾಂಡ್ ಗಳನ್ನ ವಿತರಣೆ ಮಾಡುವುದರ ಮೂಲಕ ಸರಿದೂಗಿಸಿಕೊಳ್ಳುತ್ತಾ ಬಂದಿದೆ. ಬಾಂಡ್ ಎಂದರೆ ಸಾಲ ಪತ್ರ.
514 viewsYaseen M (KCS) @spardhaloka, 02:50
Open / Comment
2021-02-23 04:42:15 - ‘ಬುದ್ಧನೆಡೆಗೆ ಮರಳಿ ಮನೆಗೆ’ ಎಂಬ ಘೋಷ ವಾಕ್ಯದಡಿ 1956ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಬೌದ್ಧ ಧಮ್ಮ ಸ್ವೀಕರಿಸಿದರು.
1.0K viewsYaseen M (KCS) @spardhaloka, 01:42
Open / Comment
2021-02-22 19:50:27
Photo from See_Me_Alone
407 viewsMITHUN, 16:50
Open / Comment