Get Mystery Box with random crypto!

'ಸ್ಪರ್ಧಾಲೋಕ'-'IAS/KAS..in ಕನ್ನಡ'

Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Channel address: @spardhaloka
Categories: Uncategorized
Language: English
Subscribers: 30.17K
Description from channel

"ಐಎಎಸ್ /ಕೆಎಎಸ್ & ಇತರೆ ಪರೀಕ್ಷೆಗಳಿಗಾಗಿ ಕನ್ನಡದಲ್ಲಿ ವಿಸ್ತೃತ ನೋಟ್ಸ್ "(IAS/KAS Notes in Kannada) Admins-
@yaseen7ash
@Prithvidevgowda
★Blog Link— https://www.spardhaloka.blogspot.in/
★FaceBook link— https://m.facebook.com/spardhaloka.blogspot.in/

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

1

2 stars

0

1 stars

1


The latest Messages 4

2021-02-21 08:56:17 *. ರಿವರ್ಸ್‌ ರೆಪೋ: ಬ್ಯಾಂಕುಗಳು ರಿಸರ್ವ್‌ ಬ್ಯಾಂಕಿನಲ್ಲಿ ಇಡುವ ಹಣ
3.5K viewsYaseen M (KCS) @spardhaloka, 05:56
Open / Comment
2021-02-21 08:56:17 *. ರೆಪೋ ದರ: ಬ್ಯಾಂಕುಗಳು ರಿಸರ್ವ್‌ ಬ್ಯಾಂಕಿನಿಂದ ಪಡೆಯುವ ಸಾಲ
3.4K viewsYaseen M (KCS) @spardhaloka, 05:56
Open / Comment
2021-02-21 08:56:17 ★. ಹವಾಮಾನ ಮಾಪಕಗಳಾದ ಉಷ್ಣತೆ, ಮಳೆ, ಗಾಳಿ ಮತ್ತು ಆದ್ರìತೆಗಳಲ್ಲುಂಟಾಗುವ ದೀರ್ಘ‌ಕಾಲೀನ ಬದಲಾವಣೆಯೇ ಹವಮಾನ ಬದಲಾವಣೆ.

★.ಭೂಮಿಗೆ ಸಮೀಪವಿರುವ ವಾತಾವರಣದ (ಟ್ರೊಪೊಸ್ಪಿಯರ್‌) ಸರಾಸರಿ ಉಷ್ಣಾಂಶ ಏರಿಕೆಯೇ "ಜಾಗತಿಕ ತಾಪಮಾನ ಏರಿಕೆ'.
3.4K viewsYaseen M (KCS) @spardhaloka, 05:56
Open / Comment
2021-02-21 08:56:17 *. ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 17 ರಂದು ಆಚರಿಸಲಾಗುವುದು. ಜಾಗತಿಕ ಮಟ್ಟದಲ್ಲಿ ಬಡತನವನ್ನು ನಿರ್ಮೂಲನೆ ಮಾಡುವ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
3.1K viewsYaseen M (KCS) @spardhaloka, 05:56
Open / Comment
2021-02-21 08:23:53
Current affairs February 21
3.3K viewsMITHUN, 05:23
Open / Comment
2021-02-21 05:44:15 ಮಣ್ಣು-ಕಲ್ಲಿನ ಮಾದರಿ ತರುವ ಕಾರ್ಯಾಚರಣೆ: ಮಂಗಳನ ಅಂಗಳಕ್ಕಿಳಿದ ನಾಸಾ ನೌಕೆ
ಪ್ರಜಾವಾಣಿ ವಾರ್ತೆ Updated: 20 ಫೆಬ್ರವರಿ 2021, 01:00 IST
ಅಕ್ಷರ ಗಾತ್ರ :ಆ |ಆ |ಆ

ಮಂಗಳ ಗ್ರಹದಲ್ಲಿ ಜೀವಿಗಳು, ಸೂಕ್ಷ್ಮಾಣು ಜೀವಿಗಳು ಇದ್ದವೇ ಎಂಬುದನ್ನು ಪರಿಶೀಲಿಸಲು ಅಲ್ಲಿನ ಮಣ್ಣು-ಕಲ್ಲಿನ ಮಾದರಿಯನ್ನು ತರಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಕಳುಹಿಸಿದ್ದ ‘ಪರ್ಸಿವಿಯರೆನ್ಸ್‌’ ರೋವರ್‌ ನೌಕೆಯು ಶುಕ್ರವಾರ ಯಶಸ್ವಿಯಾಗಿ ಮಂಗಳನ ಅಂಗಳದಲ್ಲಿ ಇಳಿದಿದೆ. ನಾಸಾದ ‘ಮಾರ್ಸ್‌ 2020’ ಯೋಜನೆಯ ಒಂದು ಪ್ರಮುಖ ಘಟ್ಟ ಮುಗಿದಿದೆ. ಪರ್ಸಿವಿಯರೆನ್ಸ್ ರೋವರ್ ನೌಕೆಯು, ಮಂಗಳನ ಅಂಗಳದಲ್ಲಿ ಮಾದರಿ ಸಂಗ್ರಹ ಕಾರ್ಯವನ್ನು ಶೀಘ್ರವೇ ಆರಂಭಿಸಲಿದೆ.

1,026 ಕೆ.ಜಿ. ಪರ್ಸಿವಿಯರೆನ್ಸ್ ನೌಕೆಯ ತೂಕ
23 ಕ್ಯಾಮೆರಾಗಳನ್ನು ಈ ನೌಕೆ ಹೊಂದಿದೆ
2 ವರ್ಷಗಳ ಕಾಲ ಮಂಗಳನ ಅಂಗಳದಲ್ಲಿ ಈ ನೌಕೆ ಮಾದರಿ ಸಂಗ್ರಹ ಕಾರ್ಯ ನಡೆಸಲಿದೆ

ಜಝೇರೋ ಕುಳಿ

ಮಂಗಳನ ಸಮಭಾಜಕ ವೃತ್ತದಿಂದ ಉತ್ತರ ದಿಕ್ಕಿನಲ್ಲಿ ಇರುವ ಜಝೇರೋ ಕುಳಿಯಲ್ಲಿ ಪರ್ಸಿವಿಯರೆನ್ಸ್ ನೌಕೆ ಇಳಿದಿದೆ. ಸುಮಾರು 45 ಕಿ.ಮೀ.ನಷ್ಟು ಉದ್ದದ ವ್ಯಾಸವಿರುವ ಈ ಕುಳಿ 350 ಕೋಟಿ ವರ್ಷಗಳ ಹಿಂದೆ ದೊಡ್ಡ ಸರೋವರವಾಗಿತ್ತು. ಹಲವು ನದಿಗಳು ಈ ಸರೋವರವನ್ನು ಬಂದು ಸೇರುತ್ತಿದ್ದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ನೀರು ಇದ್ದ ಕಾರಣಕ್ಕೆ ಇಲ್ಲಿ ಜೀವಿಗಳು ಇದ್ದಿರುವ ಸಾಧ್ಯತೆ ಇದೆ. ಹೀಗಾಗಿ ಅಧ್ಯಯನಕ್ಕೆ ಈ ಕುಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮಣ್ಣು ತರುವ ಕಾರ್ಯಾಚರಣೆ
1. ಪರ್ಸಿವಿಯರೆನ್ಸ್ ರೋವರ್ ಅನ್ನು ಹೊತ್ತಿದ್ದ ನೌಕೆಯನ್ನು 2020ರ ಜುಲೈ 30ರಂದು ಫ್ಲಾರಿಡಾದಿಂದ ಉಡ್ಡಯನ ಮಾಡಲಾಗಿತ್ತು. ಬರೋಬ್ಬರಿ 203 ದಿನಗಳ ಪ್ರಯಾಣದ ನಂತರ ಆ ನೌಕೆಯು ಈಗ ಮಂಗಳನ ಅಂಗಳ ತಲುಪಿದೆ. ಹಲವು ರಾಕೆಟ್‌ಗಳನ್ನು ಹೊಂದಿದ್ದ ಮತ್ತು ಕ್ರೇನ್‌ ಸವಲತ್ತು ಇದ್ದ ಪರಿಭ್ರಮಣ ನೌಕೆಯ ಮೂಲಕ ಪರ್ಸಿವಿಯರೆನ್ಸ್ ನೌಕೆಯನ್ನು ಮಂಗಳಕ್ಕೆ ಇಳಿಸಲಾಗಿದೆ. ಮಂಗಳನ ಅಂಗಳದಿಂದ ಮಣ್ಣಿನ ಮಾದರಿಯನ್ನು ಭೂಮಿಗೆ ತರುವ ಕಾರ್ಯಾಚರಣೆಯನ್ನು ನಾಸಾ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ) ಜಂಟಿಯಾಗಿ ನಡೆಸಲಿವೆ.

2. ಪರ್ಸಿವಿಯರೆನ್ಸ್‌ ತನ್ನಲ್ಲಿರುವ ಕೂರಿಗೆ (ಡ್ರಿಲ್ಲರ್‌) ಯಂತ್ರದ ಮೂಲಕ ಮಂಗಳನ ನೆಲದಲ್ಲಿನ ಮಣ್ಣು ಮತ್ತು ಕಲ್ಲನ್ನು ಕೊರೆಯಲಿದೆ

3. ಹೀಗೆ ಸಂಗ್ರಹಿಸಿದ ಮಾದರಿಗಳನ್ನು ಕ್ಯಾನ್‌ಗಳಲ್ಲಿ ಸಂಗ್ರಹಿಸಲಿದೆ. ಆ ಕ್ಯಾನ್‌ಗಳಲ್ಲಿ ಅಲ್ಲಿಯೇ ಬಿಸಾಡಿ ಮುಂದಕ್ಕೆ ಹೋಗಲಿದೆ

4. 2026ರ ವೇಳೆಗೆ ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಮತ್ತೊಂದು ಸಣ್ಣ ರೋವರ್ ನೌಕೆ ಮಂಗಳನ ಅಂಗಳದಲ್ಲಿ ಇಳಿಯಲಿದೆ. ಪರ್ಸಿವಿಯರೆನ್ಸ್ ನೌಕೆ ಬಿಸಾಡಿರುವ ಕ್ಯಾನ್‌ಗಳನ್ನು ಈ ರೋವರ್ ಸಂಗ್ರಹಿಸಲಿದೆ

5. ಇದೇ ವೇಳೆಗೆ ಮಂಗಳನ ಅಂಗಳದಲ್ಲಿ ಮತ್ತೊಂದು ಲ್ಯಾಂಡರ್ ನೌಕೆ ಇಳಿಯಲಿದೆ. ಮಾದರಿ ಇರುವ ಕ್ಯಾನ್‌ಗಳನ್ನು ಈ ಲ್ಯಾಂಡರ್‌ ನೌಕೆಗೆ ರೋವರ್ ನೌಕೆಯು ತುಂಬಲಿದೆ. ಆ ಕ್ಯಾನ್‌ಗಳನ್ನು ಸಣ್ಣ ರಾಕೆಟ್‌ಗಳಿಗೆ ಅಳವಡಿಸಿ, ನಭಕ್ಕೆ ಉಡ್ಡಯನ ಮಾಡಲಾಗುತ್ತದೆ

6. ಮಂಗಳನ ಸುತ್ತ ಸುತ್ತುತ್ತಿರುವ ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಉಪಗ್ರಹವು ಈ ಕ್ಯಾನ್‌ಗಳನ್ನು ಹಿಡಿದುಕೊಳ್ಳಲಿದೆ

7. ಅಂತಿಮವಾಗಿ ಈ ಕ್ಯಾನ್‌ಗಳನ್ನು ಭೂಮಿಯಲ್ಲಿರುವ ಗ್ರೌಂಡ್‌ ಸ್ಟೇಷನ್‌ಗೆ ಉಪಗ್ರಹವು ರವಾನೆ ಮಾಡಲಿದೆ. 2031ರ ವೇಳೆಗೆ ಮೊದಲ ಮಾದರಿ ಭೂಮಿಯನ್ನು ತಲುಪುವ ಸಾಧ್ಯತೆ ಇದೆ

ಆಧಾರ: ನಾಸಾ, ಪಿಟಿಐ, ರಾಯಿಟರ್ಸ್, ಬಿಬಿಸಿ

ಲ್ಯಾಂಡಿಂಗ್‌ ಮುಂದಾಳು ಕರ್ನಾಟಕ ಮೂಲದ ಮಹಿಳೆ
‘ಟಚ್‌ಡೌನ್ ಕನ್‌ಫರ್ಮ್‌ಡ್‌’. ನಾಸಾದ ಪರ್ಸಿವಿಯರೆನ್ಸ್ ರೋವರ್ ನೌಕೆ ಮಂಗಳನ ನೆಲವನ್ನು ಸ್ಪರ್ಶಿಸಿದನ್ನು ದೃಢಪಡಿಸಿದ ಘೋಷಣೆ ಇದು. ನಾಸಾದ ವಿಜ್ಞಾನಿಗಳಿಗೆ ಮತ್ತು ಈ ನೆಲಸ್ಪರ್ಶವನ್ನು ಕುತೂಹಲದಿಂದ ಕಾಯುತ್ತಿದ್ದ ಆಸಕ್ತರಿಗೆ ಈ ವಿಚಾರವನ್ನು ತಿಳಿಸಿದ್ದು ಭಾರತೀಯ ಮೂಲದ ವಿಜ್ಞಾನಿ ಸ್ವಾತಿ ಮೋಹನ್. ಸ್ವಾತಿ ಅವರು, ಪರ್ಸಿವಿಯರೆನ್ಸ್‌ ನೌಕೆಯ ನೆಲಸ್ಪರ್ಶ ಕಾರ್ಯಾಚರಣೆಯ ನಿರ್ದೇಶನ, ಪಥನಿರ್ದೇಶನ ಮತ್ತು ನಿಯಂತ್ರಣ ಕಾರ್ಯಾಚರಣೆ ತಂಡದ ಮುಖ್ಯಸ್ಥರಾಗಿದ್ದಾರೆ. ಈ ವಿಭಾಗವನ್ನು ಮಂಗಳನ ನೆಲಕ್ಕೆ ಇಳಿಯುವ ಕಾರ್ಯಾಚರಣೆಯ ಕಣ್ಣು-ಕಿವಿ ಎನ್ನಲಾಗುತ್ತದೆ.


ಸ್ವಾತಿ ಮೋಹನ್

ಸ್ವಾತಿ ಅವರ ತಂದೆ-ತಾಯಿಯಾದ ಮೋಹನ್ ಮತ್ತು ಜ್ಯೋತಿ ಅವರು, ಕನ್ನಡ ನಾಡಿನವರು. ಒಂದು ವರ್ಷದ ಮಗುವಾಗಿದ್ದಾಗಲೇ ಸ್ವಾತಿ ಮೋಹನ್ ಅವರ ತಂದೆ-ತಾಯಿ, ಬೆಂಗಳೂರಿನಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು. ಅಮೆರಿಕದ ಉತ್ತರ ವರ್ಜೀನಿಯಾದಲ್ಲಿ ನೆಲೆಸಿದ್ದರು. ಸ್ವಾತಿ ಅವರು ಏರೊನಾಟಿಕ್ಸ್ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ‘9ನೇ ವರ್ಷದಲ್ಲಿ ಸ್ಟಾರ್‌ ಟ್ರೆಕ್‌ ಧಾರಾವಾಹಿ ನೋಡಿದ್ದೆ. ಬಾಹ್ಯಾಕಾಶ ಸಂಶೋಧನೆಗೆ ಬರಲು ಆ ಧಾರಾವಾಹಿಯೇ ಸ್ಫೂರ್ತಿ’ ಎಂದು ಅವರು ಹೇಳಿಕೊಂಡಿದ್ದಾರೆ.
#inNews #currentaffairs
#space #scienceandTechnology #science #nasa @spardhaloka
3.7K viewsYaseen M (KCS) @spardhaloka, edited  02:44
Open / Comment
2021-02-21 05:29:00 ಟೆಕ್ ಕಂಪನಿ ಆ್ಯಪಲ್ - ಕುಪರ್ಟಿನೊ ಮೂಲದ್ದು.
3.3K viewsYaseen M (KCS) @spardhaloka, 02:29
Open / Comment
2021-02-21 05:17:42 ★ ಇಂದ್ರಧನುಷ್ ಲಸಿಕೆ :
ಕೇಂದ್ರ ಸರ್ಕಾರದಿಂದ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಈ ಲಸಿಕೆ ನೀಡಲಾಗುವುದು.

ಡಿಫ್ತೀರಿಯಾ, ವೂಫಿಂಗ್ ಕಾಫ್, ಟೆಟಾನಸ್, ಟ್ಯುಬರ್ ಕ್ಯುಲೋಸಿಸ್, ಪೋಲಿಯೋ, ಮಿಸಲ್ಸ್, ಹೆಪಟೈಟಸ್‌ಗೆ -ಬಿ — ಈ ಏಳು ರೋಗಗಳ ನಿರ್ಮೂಲನೆಗಾಗಿ ಈ ಲಸಿಕೆ ನೀಡಲಾಗುತ್ತದೆ.

ಕೇಂದ್ರ ಸರ್ಕಾರ ಪ್ರಸ್ತುತ ಇಂದ್ರಧನುಷ್ 3.0 ಅಭಿಯಾನ ಅನುಷ್ಠಾನಗೊಳಿಸಿದೆ.

#health #generalStudies #indradhansh @spardhaloka
3.2K viewsYaseen M (KCS) @spardhaloka, 02:17
Open / Comment
2021-02-21 05:06:35 ★ ವಿತ್ತೀಯ ಕೊರತೆ (fiscal deficit)

ಎಲ್ಲ ಉದ್ದೇಶಗಳಿಗೆ ತಗಲುವ ಸಾರ್ವಜನಿಕ ವೆಚ್ಚ ಮತ್ತು ಎಲ್ಲ ಮೂಲಗಳಿಂದ ಬರುವ ಒಟ್ಟು ವರಮಾನದ ನಡುವಿನ ಅಂತರಕ್ಕೆ ವಿತ್ತೀಯ ಕೊರತೆಯೆಂಬ ಹೆಸರು.

ಸಹಜವಾಗಿ ಈ ಕೊರತೆಯನ್ನು ಭರಿಸಲು ಆರ್‌ಬಿಐ ಸಹಕರಿಸಿದಾಗ ಹಣದ ಚಲಾವಣೆಯಲ್ಲಿ ಹೆಚ್ಚಳವಾಗುತ್ತದೆ.

ಜಿಡಿಪಿ ಮತ್ತು ವಿತ್ತೀಯ ಕೊರತೆಯ ಅನುಪಾತದಲ್ಲಿ ಕಾಣುವ ಏರಿಳಿತವು ಆರ್ಥಿಕ ಸ್ಥಿತಿಗತಿಯನ್ನು ತೋರಿಸುವ ಪ್ರಧಾನ ಸೂಚಿಗಳಲ್ಲೊಂದು.

#economics #financialEconomy #gdp @spardhaloka
3.2K viewsYaseen M (KCS) @spardhaloka, 02:06
Open / Comment
2021-02-20 15:40:45
3.5K viewsMITHUN, 12:40
Open / Comment